‘ಬಿಗ್ ಬಾಸ್’ ಬೆಡಗಿ (Bigg Boss Kannada 5) ನಿವೇದಿತಾ ಗೌಡ (Niveditha Gowda) ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮತ್ತೊಂದು ಬೋಲ್ಡ್ ಆಗಿರೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಿನಿ ಡ್ರೆಸ್ ಧರಿಸಿ ಮಿಂಚಿದ ನಿವೇದಿತಾ ಮೈಮಾಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಡಿವೋರ್ಸ್ (Divorce) ಬಳಿಕ ನಿವೇದಿತಾ ಮತ್ತಷ್ಟು ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ. ಸದಾ ಟ್ರೋಲಿಗರ ಬಾಯಿಗೆ ಆಹಾರವಾಗೋ ನಿವೇದಿತಾ ಮತ್ತೊಂದು ಬೋಲ್ಡ್ ವಿಡಿಯೋ ಹಂಚಿಕೊಂಡು ಪಡ್ಡೆಹುಡುಗರ ಹುಬ್ಬೇರುವಂತೆ ಮಾಡಿದ್ದಾರೆ.
View this post on Instagram
ಮಿನಿ ಡ್ರೆಸ್ ಧರಿಸಿ ನಿವೇದಿತಾ ಸೊಂಟ ಬಳುಕಿಸಿದ್ದಾರೆ. ರೀಲ್ಸ್‌ವೊಂದಕ್ಕೆ ಅವರು ಹೆಜ್ಜೆ ಹಾಕಿದ್ದಾರೆ. ಕ್ಯೂಟ್ ಆಗಿ ಕಾಣಿಸಿಕೊಂಡಿರೋ ನಿವಿನ ನೋಡಿ ಪಡ್ಡೆಹುಡುಗರು ಗೊಂಬೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ
ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಕೆಟ್ಟ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದರು. ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಮತ್ತಷ್ಟು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿಕೆ ನೀಡಿದ್ದರು.
View this post on Instagram
ಸದ್ಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಗೆ (Chandan Shetty) ನಾಯಕಿಯಾಗಿ ‘ಮುದ್ದು ರಾಕ್ಷಸಿ’ (Muddu Rakshasi) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸ್ಪರ್ಧಿಯಾಗಿದ್ದಾರೆ.