`ರೋಡಿಸ್’ (Roadies Show) ಖ್ಯಾತಿಯ ನಂದು ಮತ್ತು ಜಶ್ವಂತ್ (Jashwanth) ಪ್ರೇಮ ಪಕ್ಷಿಗಳಾಗಿ ಬಿಗ್ ಬಾಸ್ ಒಟಿಟಿಗೆ(Bigg Boss) ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಕೂಡ ಲವ್ ಬರ್ಡ್ಸ್ ಆಗಿಯೇ ಹೈಲೈಟ್ ಆಗಿದ್ದರು. ಬಿಗ್ ಬಾಸ್ ಶೋ ನಂತರ ಇಬ್ಬರ ಲವ್ ಸ್ಟೋರಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿತ್ತು. ಈ ಬಗ್ಗೆ ಸ್ವತಃ ಬಿಗ್ ಬಾಸ್ ನಂದು (Nandu) ಉತ್ತರ ಕೊಟ್ಟಿದ್ದಾರೆ.
ಒಟಿಟಿ ಬಿಗ್ ಬಾಸ್‌ನಲ್ಲಿ ನಂದು ಮತ್ತು ಜಶ್ ಜೋಡಿಗಳಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಈ ಶೋ ಬಳಿಕ ನಂದು ಮತ್ತು ಜಶ್ವಂತ್ ಭೋಪಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎನ್ನಲಾಗಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಸ್ಪರ್ಧಿ ನಂದು ಸ್ಪಷ್ಟನೆ ಕೊಟ್ಟಿದ್ದಾರೆ.
ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು, ಇತಿಹಾಸವನ್ನೇ ಸೃಷ್ಟಿಸಿದ್ವಿ. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ವಿ. ನಾನು ರಿಲೇಷನ್‌ಶಿಪ್‌ಗೆ ಬರುವಾಗ ಗಿವ್ ಅಪ್ ಮಾಡಬಾರು ಎಂದು ಯೋಚಿಸಿದ್ದೆ, ಆದರೆ ಸಂಬಂಧ (Relationship) ಅಂತ್ಯಗೊಳಿಸುವ (Breakup) ಸಮಯದಲ್ಲಿ ಹಾಗೇ ಇರಲಿಲ್ಲ. ಜಶ್ವಂತ್, ನನಗೆ ಸ್ವಲ್ಪ ಸಮಯ ಬೇಕು ಅಂತಾ ಹೇಳಿದಾಗ ಅವನ ಖುಷಿ ಕೂಡ ನಾನು ಆಯ್ಕೆ ಮಾಡಬೇಕಾಗುತ್ತದೆ. ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ನಾವು ಡಿಸೈಡ್ ಮಾಡಿದ್ದೀವಿ, ನಮ್ಮ ನಮ್ಮ ಲೈಫ್‌ನಲ್ಲಿ ನಾವು ಮೂವ್ ಆನ್ ಆಗಬೇಕು ಅಂತಾ ಎಂದು ಸೋಷಿಯಲ್ ಮೀಡಿಯಾದ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಆ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲಾ ಅಂತಾ ನಾನು ಬೇಸರ ಪಟ್ಟುಕೊಳ್ಳಲ್ಲ. ನನ್ನ ಜೀವನದಲ್ಲಿ ಈಗ ಏನೆಲ್ಲಾ ಇದೆ ಅದಕ್ಕೆ ನಾನು ಅಭಾರಿಯಾಗಿರುತ್ತೇನೆ. ಎಲ್ಲದ್ದಕ್ಕಿಂತ್ ಹೆಚ್ಚಾಗಿ ನನ್ನಲ್ಲಿ ಬ್ಯೂಟಿಫುಲ್ ಹಾರ್ಟ್ ಮತ್ತು ನಗು ಇದೆ ಎಂದು ಪಾಸಿಟಿವ್ ಆಗಿ ನಂದು ಬರೆದುಕೊಂಡಿದ್ದಾರೆ. ಜಶ್ವಂತ್ ಜೊತೆಗಿನ ಬ್ರೇಕಪ್ (Breakup) ಆಗಿರುವ ಬಗ್ಗೆ ಅಧಿಕೃತವಾಗಿ ನಂದು ಹೇಳಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k




