ಮುಂಬೈ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸೆಟ್‍ನಿಂದಲೇ ನೇರವಾಗಿ ಸ್ಪರ್ಧಿಯನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆಯೊಂದು ಮರಾಠಿ ಬಿಗ್ ಬಾಸ್ ಎರಡನೇ ಅವೃತ್ತಿಯಲ್ಲಿ ನಡೆದಿದೆ.
ಬಿಗ್‍ಬಾಸ್ ಸ್ಪರ್ಧಿಯಾದ ಅಭಿಜಿತ್ ಬಿಚುಕಲೆ ಅವರ ವಿರುದ್ಧ ಸತಾರಾ ಪೊಲೀಸ್ ಠಾಣೆಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು ಈ ಪ್ರಕರಣದ ಮೇಲೆ ಅವರನ್ನು ಬಂಧಿಸಲಾಗಿದೆ. ರಾಜಕೀಯ ಕಾರ್ಯಕರ್ತನಾಗಿರುವ ಅಭಿಜೆತ್ ಬಿಚುಕಲೆ ಅವರನ್ನು ರಾಜಕೀಯ ಕೋಟಾದ ಮೇಲೆ ಬಿಗ್‍ಬಾಸ್‍ಗೆ ಆಯ್ಕೆ ಮಾಡಲಾಗಿತ್ತು.
Advertisement
Advertisement
2015ದಿಂದ ಈ ಚೆಕ್ ಬೌನ್ಸ್ ಪ್ರಕರಣ ಕೋರ್ಟಿನಲ್ಲಿ ಇತ್ತು. ಈ ವಿಚಾರವಾಗಿ ಕೋರ್ಟ್ ಅಭಿಜಿತ್ ಅವರಿಗೇ ಎಷ್ಟು ಸಲ ಸಮನ್ಸ್ ಕಳುಹಿಸಿದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅದ್ದರಿಂದ ಕೋರ್ಟ್ ಅವರ ಮೇಲೆ ವಾರೆಂಟ್ ಜಾರಿ ಮಾಡಿತ್ತು. ಈ ಕಾರಣದಿಂದ ಅವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರೂ ಅವರನ್ನು ಅಲ್ಲಿಂದಲೇ ನೇರವಾಗಿ ಬಂಧಿಸಿ ಕರೆದುಕೊಂಡು ಬರಲಾಗಿದೆ.
Advertisement
Advertisement
ಕೋರ್ಟ್ ವಾರೆಂಟ್ ನೀಡಿದ ಬಳಿಕ ಸತಾರಾ ಠಾಣಾ ಪೊಲೀಸರು ಮತ್ತು ಗೋರೆಗಾಂವ್ ಪೂರ್ವದ ಆರೆ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸೇರಿ ಫಿಲ್ಮ್ ಸಿಟಿ ಮೈದಾನದಲ್ಲಿ ನಡೆಯುತ್ತಿರುವ ಬಿಗ್‍ಬಾಸ್ ಸೀಸನ್ 2 ರ ಸೆಟ್‍ಗೆ ನೇರವಾಗಿ ಹೋಗಿ ಅಲ್ಲಿಂದಲೇ ಅಭಿಜಿತ್ ಅವರನ್ನು ಬಂಧಿಸಿ ಕರೆದುಕೊಂದು ಕೊಂಡು ಬಂದಿದ್ದಾರೆ. ಈ ಸಮಯದಲ್ಲಿ ಶೋನ ಸಿಬ್ಬಂದಿ ಯಾರೂ ವಿರೋಧ ಪಡಿಸಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವಿವಾದತ್ಮಾಕ ವ್ಯಕ್ತಿಯಾಗಿರುವ ಅಭಿಜಿತ್ ಪುರಸಭೆ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಯಾವುದೇ ಯಶಸ್ಸು ಕಂಡಿರಲಿಲ್ಲ. ಅಭಿಜಿತ್ ಅವರನ್ನು ಬಂಧಿಸಿ ಸತಾರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಂದು ಕೋರ್ಟ್‍ಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]