ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್

Public TV
2 Min Read
mohanlal 2

ಲಯಾಳಂ ಬಿಗ್ ಬಾಸ್‌ನಲ್ಲಿ (Bigg Boss Malyalam 5)  ಹೈಡ್ರಾಮಾ ನಡೆದಿದೆ. ವೇದಿಕೆಯಲ್ಲಿ ಮೋಹನ್ ಲಾಲ್‌ಗೆ ಸ್ಪರ್ಧಿಗಳಿಂದ ಅವಮಾನವಾದ ಕಾರಣ, ಶೋ ಮಧ್ಯೆಯೇ ಮೋಹನ್ ಲಾಲ್ (Mohan Lal) ಹೊರನಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

mohan lal 3

ನಿರ್ದೇಶಕ ಅಖಿಲ್ ಮಾರಾರ್ (Akhil Marar) ಸೀಸನ್ 5ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಸ್ಟರ್ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಗೆ ಟಾಸ್ಕ್‌ವೊಂದು ನೀಡಲಾಗಿತ್ತು. ಗೇಮ್ ಫನ್ ಆಗಿ ನಡೆಯಲಿಲ್ಲ. ಅದನ್ನು ತುಂಬಾ ಕೆಟ್ಟ ರೀತಿಯಲ್ಲಿ ಸ್ಪರ್ಧಿಗಳು ಅಂತ್ಯ ಮಾಡಿದರು. ಈ ವೇಳೆ ಅಖಿಲ್ ಮಾರಾರ್ ತಾಳ್ಮೆ ಕಳೆದುಕೊಂಡು ಅಸಭ್ಯವಾಗಿ ವರ್ತಿಸುತ್ತಿರುವುದು ಕಂಡು ಬಂದಿದೆ. ಟಿವಿಯಲ್ಲಿ ಪ್ರಸಾರ ಮಾಡಲಾಗದ ಪದಗಳನ್ನು ಏಂಜಲಿನಾ, ಸಾಗರ್ ಮತ್ತು ಜುನೈಜ್ ಮೇಲೆ ಬಳಸಿದ್ದಾರೆ. ಈ ಘಟನೆ ಮೋಹನ್ ಲಾಲ್ ಮುಂದೆ ಚರ್ಚೆ ಆಗುವ ಮುನ್ನವೇ ಸೋಷಿಯಲ್ ಮೀಡಿಯಾದಲ್ಲಿ ವಾದ- ವಿವಾದ ಸೃಷ್ಟಿ ಆಗಿತ್ತು. ಈ ಘಟನೆಯನ್ನು ಇನ್ನಿತರ ಸ್ಪರ್ಧಿಗಳು ಮೋಹನ್ ಲಾಲ್ ಮುಂದೆ ಚರ್ಚೆ ಮಾಡಿದ್ದರು. ಇದನ್ನೂ ಓದಿ:ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ: ಕೋರ್ಟ್ ಮುಂದೆ ಅರ್ಜಿ

bigg boss

ಮನೆಯ ಕ್ಯಾಪ್ಟನ್ ಆಗಿ ಅಸಭ್ಯವಾಗಿ ವರ್ತಿಸುತ್ತಿರುವುದು ತಪ್ಪು ಹೀಗಾಗಿ ಕ್ಯಾಪ್ಟನ್ ಬ್ಯಾಡ್ಜ್‌ ಸಾಗರ್‌ಗೆ ನೀಡುವಂತೆ ಮೋಹನ್ ಲಾಲ್ ಹೇಳಿದ್ದಾರೆ. ಕ್ಯಾಪ್ಟನ್ ಬ್ಯಾಂಡ್‌ನ ಕೊಡುವುದಿಲ್ಲ ಎಂದು ಅಖಿಲ್ ವಾದ ಮಾಡುತ್ತಾರೆ ಆದರೆ ಮೋಹನ್ ಲಾಲ್ ಒತ್ತಾಯ ಮಾಡಿದ ಕಾರಣ ಬ್ಯಾಂಡ್‌ನ ಕಿತ್ತು ಬಿಸಾಡುತ್ತಾರೆ. ಆದರೆ ಕ್ಷಮೆ ಕೇಳುವುದಿಲ್ಲ ಎನ್ನುತ್ತಾರೆ. ಆ ಕ್ಷಣವೇ ಮೋಹನ್ ಲಾಲ್‌ಗೆ ಕೋಪ ಹೆಚ್ಚಾಗುತ್ತದೆ ಕಂಟ್ರೋಲ್ ಮಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಬಿಗ್ ಬಾಸ್ ಇಬ್ಬರನ್ನು ಕನ್ಫೆಶನ್ ರೂಮ್‌ಗೆ ಬರುವಂತೆ ಅನೌನ್ಸ್ ಮಾಡುತ್ತಾರೆ.

ಕನ್ಫೆಷನ್ ರೂಮ್‌ನಲ್ಲೂ ಸಾಗರ್‌ಗೆ ಅಖಿಲ್ ಕ್ಷಮೆ ಕೇಳುವುದಕ್ಕೆ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಚರ್ಚೆ ಮಾಡಿದ್ದರೂ ಅಖಿಲ್ ವಾದ ನಿಲ್ಲಿಸದ ಕಾರಣ ಮೋಹನ್ ಲಾಲ್ ಬೇಸರ ಮಾಡಿಕೊಂಡು ಕಾಲ್ ಕಟ್ ಮಾಡುವಂತೆ ಹೇಳಿ ಶೋ ನಡುವೆ ವಾಕ್ ಔಟ್ ಮಾಡುತ್ತಾರೆ. ಕ್ಯಾಪ್ಟನ್ ಬ್ಯಾಡ್ಜ್ನ ನಾನು ಸಾಗರ್‌ಗೆ ಕೊಡುವಂತೆ ಗೌರವದಿಂದ ನಿಮಗೆ ಹೇಳಿದೆ ಆದರೆ ನೀವು ನನ್ನ ಮಾತಿಗೆ ಗೌರವ ಕೊಡದೆ ಅದನ್ನು ಬಿಸಾಡಿದ್ದೀರಿ. ತುಂಬಾ ಖುಷಿಯಿಂದ ಈಸ್ಟರ್ ಹಬ್ಬವನ್ನು ನಿಮ್ಮೆಲ್ಲರ ಜೊತೆ ಆಚರಿಸಬೇಕು ಎಂದು ಬಂದೆ ಆದರೆ ಇಡೀ ಪ್ಲ್ಯಾನ್ ನಿಮ್ಮಿಂದ ಹಾಳಾಗಿದೆ. ಹಾಗಾಗಿ ಈ ಎಪಿಸೋಡ್‌ನ ಇಲ್ಲಿದೆ ನಿಲ್ಲಿಸುತ್ತಿರುವೆ ಎಂದು ಮೋಹನ್ ಲಾಲ್ ಹೇಳಿ ಶೋನಿಂದ ಅರ್ಧಕ್ಕೆ ಹೊರ ನಡೆದಿದ್ದಾರೆ.

Share This Article