ಬಿಗ್ ಬಾಸ್ (Bigg Boss Kannada) ಮನೆಯ ಫ್ರೆಂಡ್ ಶಿಪ್ ಮತ್ತು ಜರ್ನಿಯ ಕುರಿತು ಸಂಗೀತಾ (Sangeetha) ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ಮನದಾಳದ ಮಾತು ಇಲ್ಲಿದೆ. ನನಗೆ ಫ್ರೆಂಡ್‌ಷಿಪ್ ಆಗೋದು ತುಂಬ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜೊತೆಗೆ ಫ್ರೆಂಡ್‌ಷಿಪ್ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಹಾಗೇ ಆಯ್ತು. ನನ್ನದು ಮತ್ತು ಅವರದು ಕೆಲವು ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು.
Advertisement
ಅವರ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ಯಾಕೆಂದರೆ ನಾನು ಅಲ್ಲಿ ಬರೀ ಗೇಮ್ ಆಡ್ತಾ ಇರ್ಲಿಲ್ಲ. ನನಗೆ ಬೇಜಾರಾಯ್ತು, ಹರ್ಟ್ ಆಯ್ತು ಅಂದರೆ ಅವರನ್ನು ಮಾತಾಡಿಸಲು ತುಂಬ ಕಷ್ಟವಾಗುತ್ತದೆ. ಅದನ್ನೆಲ್ಲ ಬದಿಗಿಟ್ಟು ಅವರನ್ನು ವಿನ್ನರ್ ಅಂತ ನೋಡಿದಾಗ, ಖಂಡಿತ ಅವರು ಅವ್ರ ಗೇಮ್ ಅನ್ನು ತುಂಬ ಚೆನ್ನಾಗಿ ಆಡಿದಾರೆ. ಅವರಿಗೆ ಕಂಗ್ರಾಜುಲೇಷನ್ಸ್ ಹೇಳ್ತೀನಿ.
Advertisement
Advertisement
ವಿನಯ್ (Vinay) ನಾನು ಈ ಮೊದಲು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆವು. ಅಲ್ಲಿಯೂ ನನಗೂ ಅವರಿಗೂ ಸುಮಾರು ಗಲಾಟೆಗಳು ನಡೆದಿದಾವೆ. ಆದರೆ ಅವ್ರು ಸಹಜವಾಗಿ ಒಳ್ಳೆಯವರು. ಒಳ್ಳೆಯ ವ್ಯಕ್ತಿತ್ವದವರು. ಸ್ವಲ್ಪ ಗಲಾಟೆಗಳು ಆಗ್ತವೆ. ನಾನೂ ಸ್ವಲ್ಪ ನೇರ ವ್ಯಕ್ತಿತ್ವದವರು. ಮುಖದ ಮೇಲೇ ಹೇಳುತ್ತೇನೆ. ಹಾಗಾಗಿಯೇ ಸ್ವಲ್ಪ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಮನೆಯಲ್ಲಿಯೂ ಗಲಾಟೆಗಳು ಆಗಿವೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪರಸ್ಪರರ ಬಗ್ಗೆ ನಮಗೆ ಗೌರವ ಇದೆ. ಅದು ಯಾವತ್ತೂ ಇರುತ್ತದೆ ಎಂದು ಭಾವಿಸುತ್ತೇನೆ.
Advertisement
ಮುಂದಿನ ದಿನಗಳಲ್ಲಿ ಫ್ರೆಂಡ್‌ಷಿಪ್‌ಗಳು ಹೇಗೆ ಮುಂದುವರಿಯುತ್ತದೆ ಎಂದು ಹೇಳುವುದು ಕಷ್ಟ. ಯಾಕೆಂದರೆ ನಾನು ಈಗಷ್ಟೇ ನೂರಹನ್ನೆರಡು ದಿನಗಳನ್ನು ಕಳೆದು ಹೊರಗೆ ಬರ್ತಿದೀನಿ. ಮನೆಯವರನ್ನು, ಸ್ನೇಹಿತರನ್ನು, ಜನರನ್ನು ಭೇಟಿಯಾಗಬೇಕು. ಹೊರಗೆ ಏನು ನಡೆಯತ್ತಿದೆ ಎಂದು ತಿಳಿದುಕೊಳ್ಳಬೇಕು. ಮನೆಯೊಳಗೆ ಒಂದು ಗೇಮ್ ಆಡ್ತಿದ್ವಿ ಅಂದುಕೊಂಡು, ಅಲ್ಲಿನ ಪ್ರೆಸ್ಟ್ರೇಷನ್, ಕೋಪ, ಸಿಟ್ಟು ಎಲ್ಲವನ್ನೂ ಅಲ್ಲೇ ಬಿಟ್ಟು ಹೊರಗೆ ಹೊಸ ಜೀವನ ಶುರುವಾಗಬಹುದು. ನೋಡಬೇಕು.
ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳು ನನಗೆ ಇಷ್ಟ. ಕೆಲವು ಇಟ್ಟಿಗೆಗಳನ್ನು ಇಟ್ಟುಕೊಂಡು ಪಾಸ್ ಮಾಡಿಕೊಂಡು ಹೋಗುವ ಟಾಸ್ಕ್ ನಂಗೆ ತುಂಬ ಇಷ್ಟವಾಗಿತ್ತು. ಅದರಲ್ಲಿ ನಾನು ಗೆದ್ದಿದ್ದೇನೆ ಕೂಡ. ಪ್ರತಿ ಸಲ ಜಿಯೊಸಿನಿಮಾ ಟಾಸ್ಕ್‌ಗೆ ಕಾಯುತ್ತಿದ್ದೆವು. ಮ್ಯೂಸಿಕಲ್ ಪಾಟ್ ಕೂಡ ಇಷ್ಟವಾಗಿತ್ತು. ಅದರಲ್ಲಿ ನಾನು ಪೌಲ್ ಮಾಡಿದೆ. ಆದರೆ ಹೇಳಲಿಲ್ಲ. ಆದರೂ ನಾನೇ ಒಪ್ಪಿಕೊಂಡು ಹೊರಗೆ ಬಂದಿದ್ದೆ.
ಬಿಗ್‌ಬಾಸ್ ಮನೆ ನಾನು ತುಂಬ ಅಂದ್ರೆ ತುಂಬ ನೊಂದುಕೊಂಡಿದ್ದ ಜಾಗ. ಯಾವಾಗ ಹೊರಗಡೆ ಬರ್ತೀನೋ ಅಂತ ಕಾಯ್ತಿದ್ದೆ. ಯಾಕೆಂದರೆ ಕೊನೆಯ ಕೆಲವು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಇಡೀ ಮನೆಯೇ ನನ್ನ ವಿರುದ್ಧವಿತ್ತು. ಎಲ್ಲರ ಎದುರಿನಲ್ಲಿಯೂ ನಾನು ಪ್ರೂವ್ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ, ಆ ಬಾತ್‌ರೂಮ್ ಏರಿಯಾ ಮತ್ತು ಟ್ರಿಯನ್ನು ಮಿಸ್ ಮಾಡ್ಕೋತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಮಿರರ್ ಅನ್ನು ಮಿಸ್ ಮಾಡ್ಕೋತೀನಿ. ನನ್ನ ಅರ್ಧ ಜರ್ನಿ ನಾನು ಅದರ ಜೊತೆಗೇ ಕಳೆದಿದ್ದೇನೆ. ಅಲ್ಲಿರುವ ದೇವಿ ವಿಗ್ರಹವನ್ನು ಮಿಸ್ ಮಾಡ್ಕೋತೀನಿ. ಅದರಿಂದ ತುಂಬ ಶಕ್ತಿ ಪಡೆದುಕೊಂಡಿದ್ದೇನೆ.
ನನಗೆ ಬಿಗ್‌ಬಾಸ್ ಮನೆಯ ಧ್ವನಿಯ ಮೇಲೆ ಎಷ್ಟು ಕ್ರಶ್ ಇತ್ತು ಎಂದರೆ, ಕೊನೆಯ ಗಳಿಗೆಯಲ್ಲಿಯೂ ಅವರಿಗೆ ಏನಾದ್ರೂ ಮಾತಾಡಿಬಿಗ್‌ಬಾಸ್ ಎಂದು ಕೇಳಿಕೊಳ್ಳುತ್ತಿದ್ದೆ. ಅಲ್ಲದೆ ನಾನು ಯಾವಾಗ ಕುಗ್ಗಿದ್ದೆನೋ ಆಗೆಲ್ಲ ಬಿಗ್‌ಬಾಸ್ ನನಗೆ ಅಕ್ಷರಶಃ ತುಂಬ ಸಪೋರ್ಟ್ ಮಾಡಿದಾರೆ. ನನ್ನ ಇಡೀ ಜರ್ನಿಯಲ್ಲಿ ಅವರ ಸಪೋರ್ಟ ತುಂಬ ಇದೆ. ಅದನ್ನು ನಾನು ಎಂದೆಂದಿಗೂ ಮರೆಯಲ್ಲ.