ಬಿಗ್ ಬಾಸ್ (Bigg Boss Kannada) ಮನೆ ಬೆಳಗ್ಗೆ ರಣರಂಗವಾಗಿತ್ತು. ನೆನ್ನೆಯಿಂದಲೇ ನಮ್ರತಾ (Namrata Gowda) ಮತ್ತು ತನಿಷಾ (Tanisha Kuppunda) ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಿತ್ತು. ಅದು ಇವತ್ತು ನಿಜವಾಗಿದೆ. ಇಬ್ಬರೂ ಜೋರು ಧ್ವನಿಯಲ್ಲೇ ಕಿತ್ತಾಡಿದ್ದಾರೆ. ತನಿಷಾ ಮೇಲೆ ನಮ್ರತಾ ಗರಂ ಆಗಿದ್ದಾರೆ. ಶಟಪ್.. ಮುಚ್ಕೋ ಬಾಯಿ ಎಂದು ಹೇಳುವಷ್ಟರ ಮಟ್ಟಿಗೆ ಜಗಳ ಬೆಳೆದು ನಿಂತಿದೆ.
ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಜಡೆ ಜಗಳ ಶುರುವಾಗಿದೆ. ತನಿಷಾ ಮತ್ತು ನಮ್ರತಾ ಗೌಡ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಫನ್ ಟಾಸ್ಕ್ ಫನ್ ಆಗಿ ನಡೆಯಬೇಕಿದ್ದ ಜಾಗದಲ್ಲಿ ನಮ್ರತಾ- ತನಿಷಾ ಕಿತ್ತಾಡಿಕೊಂಡಿದ್ದಾರೆ. ರೊಚ್ಚಿಗೆದ್ದ ನಮ್ರತಾ, ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕುಟುಕಿದ್ದಾರೆ.
ಬಿಗ್ ಬಾಸ್ ಎಂದಿನಂತೆ ಈ ವಾರವೂ 2 ತಂಡಗಳಿಗೆ ಟಾಸ್ಕ್ ನೀಡಿದ್ರು. ಭಜರಂಗಿ’ – ‘ಉಗ್ರಂ’ ತಂಡಕ್ಕೆ ‘ಬಿಗ್ ಬಾಸ್’ ಫನ್ ಟಾಸ್ಕ್ ಕೊಟ್ಟಿದ್ದರು. ಅದೇ ‘ಗಲ್ಲಿ ಕ್ರಿಕೆಟ್’ ಇದರ ಅನುಸಾರ, ಎರಡೂ ತಂಡಗಳು ಮೂರು ಓವರ್‌ಗಳ ಗಲ್ಲಿ ಕ್ರಿಕೆಟ್ ಆಡಬೇಕಿತ್ತು. ಎರಡೂ ತಂಡದಿಂದ ತಲಾ ಒಬ್ಬರು ಅಂಪೈರ್ ಆಗಬೇಕಿತ್ತು. ‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್ ಆಗಿದ್ದರು.
ಆಟಕ್ಕೆ ತನಿಷಾ ಎಂಟ್ರಿ ಕೊಟ್ಟ ಕೂಡಲೆ ನಮ್ರತಾ, ತನಿಷಾ ಡಿಸಿಷನ್ ಫೇರ್ ಆಗಿರಲಿ ಈಗಲೇ ಹೇಳ್ತಿದ್ದೀನಿ ಎಂದು ಖಡಕ್ ಆಗಿ ಹೇಳಿ ಬಿಟ್ಟರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ನಮ್ರತಾ ಮಾತಿಗೆ ನಿಮ್ಮ ಹತ್ತಿರ ಅನ್ನಿಸಿಕೊಳ್ಳಲು ಬಂದಿಲ್ಲ ಇಲ್ಲಿ. ಇದು ನಾನ್ ಸೆನ್ಸ್. ಎಂಟರ್‌ಟೇನ್ಮೆಂಟ್ ಗೇಮ್‌ನ ಹಾಳು ಮಾಡೋಕೆ ನಿಮ್ಮಂಥೋರು ಇರಬೇಕು ಇಲ್ಲಿ ಅಂತ ತನಿಷಾ ತಿರುಗೇಟು ನೀಡಿದ್ರು.
ಗಲ್ಲಿ ಕ್ರಿಕೆಟ್’ನಲ್ಲಿ ಅಂತಿಮವಾಗಿ ‘ಭಜರಂಗಿ’ ತಂಡ ಗೆಲುವು ಸಾಧಿಸಿತು. ಉತ್ತಮ ಬ್ಯಾಟ್‌ಮ್ಯಾನ್ ಪಟ್ಟ ತುಕಾಲಿ ಸಂತುಗೆ ಒಲಿಯಿತು. ಆದರೆ ಆಟ ಮುಗಿದ್ರೂ ನಮ್ರತಾ-ತನಿಷಾ ಕೋಳಿ ಜಳಗಕ್ಕೆ ಬ್ರೇಕ್ ಬಿಳಲಿಲ್ಲ.
ಇದಾದ ಬಳಿಕ ಡಿಸಿಷನ್ ಫೇರ್ ಆಗಿರಲಿ ಈಗಲೇ ಹೇಳ್ತಿದ್ದೀನಿ ಅಂತ ತನಿಷಾ ಮುಂದೆ ಹೇಳಿಬಿಟ್ಟು. ಜಗಳದ ಬಳಿಕ ವಿನಯ್ ಮತ್ತು ಕಾರ್ತಿಕ್ ಮುಂದೆ, ನಾನು ಏನೂ ಹೇಳಿಲ್ಲ ಗುರು ನಮ್ರತಾ ಖ್ಯಾತೆ ತೆಗೆದರು. ಮಾತು ಶುರುವಾದ್ಮೇಲೆ ನಿಲ್ಲಿಸೋದೇ ಇಲ್ಲ ಅಂತ ತನಿಷಾ ಬಗ್ಗೆ ವಿನಯ್ ಗೌಡ ಕಾಮೆಂಟ್ ಮಾಡಿದ್ಮೇಲೆ, ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳಿದುಬಿಡು ಒಂದ್ಸಲಿ ಎಂದು ಕೊಂಕು ನುಡಿದರು ನಮ್ರತಾ.
Web Stories