ದೊಡ್ಮನೆಯಲ್ಲಿ ಮೊದಲು ಇದ್ದ ಸ್ನೇಹ, ಪ್ರೀತಿ ಈಗ ದ್ವೇಷಕ್ಕೆ ತಿರುಗಿದೆ. ತನಿಷಾ, ಕಾರ್ತಿಕ್ (Karthik Mahesh) ಜೊತೆಗಿನ ಸಂಗೀತಾ ಮುನಿಸು ಆಟದಲ್ಲೂ ಮುಂದುವರೆದಿದೆ. ಸವಾಲು ಎಸೆಯೋ ಟಾಸ್ಕ್‌ವೊಂದರಲ್ಲಿ ವರ್ತೂರುಗೆ ಮತ್ತು ತನಿಷಾ (Tanisha Kuppanda) ಹಸಿಮೆಣಸಿನಕಾಯಿ ತಿನ್ನಿಸಿ ಬೆವರಿಳಿಸಿದ್ದಾರೆ.


ಅದರಂತೆ ತಂಡಕ್ಕಾಗಿ ತುಕಾಲಿ ಸಂತೂ ಮತ್ತು ಕಾರ್ತಿಕ್ ತಲೆ ಬೊಳಿಸಿದ್ದಾರೆ. ಇದೀಗ ಮತ್ತೆ 2ನೇ ಬಾರಿ ಕಾರ್ತಿಕ್ ತಂಡಕ್ಕೆ ಸವಾಲು ಎಸಗಿದೆ. ಇದರ ಅನುಸಾರ ಎದುರಾಳಿ ತಂಡದದ ತನಿಷಾ-ವರ್ತೂರು 20 ಹಸಿಮೆಣಸಿನಕಾಯಿ ತಿನ್ನಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನ ಪೂರ್ಣಗೊಳಿಸಿದರೆ ತನಿಷಾ ತಂಡಕ್ಕೆ ವಿಶೇಷ ಅಧಿಕಾರ ಸಿಗಲಿದೆ.
ಸಂಗೀತಾ ಸವಾಲನ್ನ ತನಿಷಾ-ವರ್ತೂರು ಕೊಂಚ ಸಿರಿಯಸ್ ಆಗಿಯೇ ತೆಗೆದುಕೊಂಡಿದ್ದರು. ಆಗಲ್ಲ ಅಂದರೆ ಬಿಡಿ ಪರ್ವಾಗಿಲ್ಲ ಎಂದು ತಂಡದವರು ಹೇಳಿದ್ರೂ ಕೂಡ ಕ್ಯಾರೆ ಎನ್ನದೇ ತನಿಷಾ ಮೆಣಸಿಕಾಯಿ ತಿಂದಿದ್ದಾರೆ. ಖಾರ ನೇತಿಗೆ ಏರಿದ್ರೂ ಆಟ ಬಿಟ್ಟು ಕೊಡದೇ ತನಿಷಾ ಸೈ ಎನಿಸಿಕೊಂಡಿದ್ದಾರೆ.
ಈ ಎಲ್ಲಾ ಹೊಸ ಟಾಸ್ಕ್‌ಗಳು ಬ್ರಹ್ಮಾಂಡ ಗುರೂಜಿ ನೇತೃತ್ವದಲ್ಲಿ ನಡೆದಿದೆ. ನಾಮಿನೇಷನ್ ಬಿಸಿ ನಡುವೆ ತಾ ಮುಂದೂ ನಾ ಮುಂದೂ ಎಂದು ಎಲ್ಲರೂ ಆಟ ಆಡಿದ್ದಾರೆ. ಅಂದಹಾಗೆ, ಈ ವಾರ ನಮ್ರತಾ, ವಿನಯ್, ತನಿಷಾ, ಸ್ನೇಹಿತ್, ಡ್ರೋನ್ ಪ್ರತಾಪ್, ನೀತೂ, ತುಕಾಲಿ ಸಂತೂ, ಸಿರಿ, ಸಂಗೀತಾ ಎಲಿಮಿನೇಷನ್ ಹಾಟ್ ಸೀಟ್‌ನಲ್ಲಿದ್ದಾರೆ.



