ಕಿರುತೆರೆಯ ಬಿಗ್ ಶೋ ಬಿಗ್ ಬಾಸ್‌ಗೆ(Bigg Boss) ಈಗಾಗಲೇ ಕೌಂಟ್ ಡೌನ್ ಶುರುವಾಗಿದೆ. ಬಿಗ್ ಬಾಸ್ ಓಟಿಟಿ 38 ದಿನಗಳನ್ನ ಪೂರೈಸಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಈ ಶೋ ಮುಗಿಯಲಿದೆ. ಈ ಬೆನ್ನಲ್ಲೇ ಟಿವಿ ಶೋ ಬಿಗ್ ಬಾಸ್ ಶುರುವಾಗಲು ದಿನಗಣನೆ ಶುರುವಾಗಿದೆ. ಈ ಸೀಸನ್‌ನಲ್ಲಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಹೊಸ ಸ್ಪರ್ಧಿಗಳ ಜೊತೆ ಮಾಜಿ ಸ್ಪರ್ಧಿಗಳು ಇರಲಿದ್ದಾರೆ ಎಂಬ ಮಾಹಿತಿ ವಾಹಿನಿ ಕಡೆಯಿಂದಲೇ ಹೊರಬಿದ್ದಿದೆ.
ಓಟಿಟಿಯಲ್ಲಿ ದೊಡ್ಮನೆ ಆಟ ಮುಗಿಯಲು ಕೆಲವೇ ದಿನಗಳು ಬಾಕಿಯಿದೆ. ಒಂದೇ ವಾರದ ಗ್ಯಾಪ್‌ನಲ್ಲಿ ಬಿಗ್ ಬಾಸ್ 9ನೇ ಸೀಸನ್ ಬರಲು ಡೇಟ್ ಫಿಕ್ಸ್ ಆಗಿದೆ. ಈ ಹೊಸ ಸೀಸನ್ ಹೇಗಿರಲಿದೆ ಎಂಬುದಕ್ಕೆ ವಾಹಿನಿ ಕೂಡ ಹಿಂಟ್ ಬಿಟ್ಟು ಕೊಟ್ಟಿದೆ. ಹೊಸ ಸ್ಪರ್ಧಿಗಳ ಜೊತೆ ಮಾಜಿ ಸ್ಪರ್ಧಿಗಳು ಇರಲಿದ್ದಾರೆ ಎಂಬುದನ್ನ ತಿಳಿಸಲು ಈ ಕುರಿತ ಪ್ರೋಮೋ ಕೂಡ ಔಟ್ ಆಗಿದೆ. ಇದರಲ್ಲಿ ಪ್ರಶಾಂತ್ ಸಂಬರಗಿ, ವೈಷ್ಣವಿ, ದೀಪಿಕಾ ದಾಸ್, ಅನುಪಮಾ ಗೌಡ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ನಾನು ‘ಹಾಟ್ ಹಾಟ್’ ಆಗಿ ಕಾಣಿಸಿಕೊಂಡರೆ ಫ್ಯಾನ್ಸ್ ಒಪ್ಪಲ್ಲ ಅಂದ್ಬಿಟ್ರು ರಚಿತಾ ರಾಮ್
ಸುದೀಪ್ (Sudeep) ನಿರೂಪಣೆಯ ಬಿಗ್ ಬಾಸ್ ಹೊಸ ಸೀಸನ್ ಪ್ರೋಮೋ ಹಂಚಿಕೊಳ್ಳಲಾಗಿದೆ. ಮಾಜಿ ಸ್ಪರ್ಧಿಗಳಾದ ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ವೈಷ್ಣವಿ ಅವರು ಕದ್ದು ಮುಚ್ಚಿ ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ಬಿಗ್ ಬಾಸ್‌ಗೆ ಮನೆಗೆ ಓಡೋಡಿ ಬರುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ. ಇಷ್ಟದ ಹಳೇ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಯಲ್ಲಿ ನೋಡಲು ವೀಕ್ಷಕರು ಕಾದಿದ್ದಾರೆ. ಇನ್ನೂ ಯಾರೆಲ್ಲ ಈ ಬಾರಿ ಚಾನ್ಸ್ ಪಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ನಿರ್ಮಾಣ ಆಗಿದೆ.
ಇನ್ನು ಸೆ.24ರ ಸಂಜೆ ಬಿಗ್ ಬಾಸ್ ಸೀಸನ್ 9, ಸಂಜೆ 6ಕ್ಕೆ ಗ್ರ್ಯಾಂಡ್ ಲಾಂಚ್ ಆಗಲಿದೆ. ಪ್ರತಿದಿನ ರಾತ್ರಿ 9.30ಕ್ಕೆ ಸಂಚಿಕೆ ಪ್ರಸಾರವಾಗಲಿದೆ. ಸುದೀಪ್ ನಿರೂಪಣೆಯ ಈ ಶೋ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.