ಬಿಗ್ ಬಾಸ್ ಮನೆಯ(Bigg Boss House) ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನ ಪಡೆಯುವುದರ ಮೂಲಕ ದೊಡ್ಮನೆ ಸೌಂಡ್ ಮಾಡುತ್ತಿದೆ. ಇದೀಗ ನಾಲ್ಕನೇ ವಾರದ ಕ್ಯಾಪ್ಟನ್ ಆಗಿರುವ ದೀಪಿಕಾ ದಾಸ್ (Deepika Das) ಮೇಲೆ ರೂಪೇಶ್ ರಾಜಣ್ಣ (Roopesh Rajanna) ಕಿಡಿಕಾರಿದ್ದಾರೆ.
Advertisement
ಬಿಗ್ ಬಾಸ್ ಮನೆಯಲ್ಲಿ(Bigg Boss) ಪ್ರತಿದಿನವೂ ಭಿನ್ನ ಶೈಲಿಯ ಟಾಸ್ಕ್‌ಗಳನ್ನ ಕೊಡಲಾಗುತ್ತದೆ. ಅದರಂತೆಯೇ ಗುಂಪಿಗೆ ಸೇರದ ಪದವನ್ನ ಗ್ರಹಿಸುವ ಟಾಸ್ಕ್ ಅನ್ನು ಎರಡು ತಂಡಗಳಾದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Roopesh Rajanna) ಟೀಮ್‌ಗೆ ನೀಡಲಾಗಿತ್ತು. ಈ ವೇಳೆ ಗುಂಪಿಗೆ ಸೇರದ ಪದ ಯಾವುದು ಎಂಬುದನ್ನ ಎರಡು ತಂಡಗಳು ತಿಳಿಸಬೇಕು. ಇದನ್ನ ದೀಪಿಕಾ ದಾಸ್ ಸರಿ ಉತ್ತರಕ್ಕೆ ಸಮ್ಮತಿ ಸೂಚಿಸಬೇಕು. ಈ ವೇಳೆ ದೀಪಿಕಾ ದಾಸ್ ನಿರ್ಧಾರಕ್ಕೆ ರೂಪೇಶ್ ರಾಜಣ್ಣ ಸಿಡಿದೆದಿದ್ದಾರೆ. ಇದನ್ನೂ ಓದಿ:ತೆಲುಗಿನ ನಟ ಕಲ್ಯಾಣ್ ರಾಮ್ ಜೊತೆ ಆಶಿಕಾ ರಂಗನಾಥ್ ರೊಮ್ಯಾನ್ಸ್
Advertisement
ರೂಪೇಶ್ ರಾಜಣ್ಣ ಟೀಮ್ ಆಡುವಾಗ ಕೆಲವೊಂದು ಪ್ರಶ್ನೆಗಳಿಗೆ ದೀಪಿಕಾ ಅಂಕಗಳನ್ನ ಕೊಟ್ಟಿರಲಿಲ್ಲ. ಸಂಬರ್ಗಿ ತಂಡಕ್ಕೆ ಅಂಕಗಳನ್ನ ನೀಡಿರುವುದು ರೂಪೇಶ್ ರಾಜಣ್ಣ ಅವರ ಬೇಸರಕ್ಕೆ ಕಾರಣವಾಗಿದೆ. ಎದುರಾಳಿ ತಂಡಕ್ಕೆ ದೀಪಿಕಾ ದಾಸ್ ಬೆಂಬಲಿಸುತ್ತಿದ್ದಾರೆ ಎಂದು ರಾಜಣ್ಣ ಆರೋಪ ಮಾಡಿದ್ದಾರೆ. ದೀಪಿಕಾ ದಾಸ್ ನಡೆಗೆ ರೂಪೇಶ್ ರಾಜಣ್ಣ ತಂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೂಪೇಶ್ ರಾಜಣ್ಣ, ದೀಪಿಕಾ ಮಾತಿಗೆ ವಾಕ್ ಔಟ್ ಆಗಿದ್ದಾರೆ.
Advertisement
Advertisement
ಅಷ್ಟಕ್ಕೂ ಪ್ರಶ್ನೆ ತಪ್ಪಾ, ಅಥವಾ ತಂಡಗಳ ಉತ್ತರ ಸರೀನಾ, ಈ ವಿಚಾರದಲ್ಲಿ ದೀಪಿಕಾ ದಾಸ್ ನಿರ್ಧಾರ ಅದೆಷ್ಟರ ಮಟ್ಟಿಗೆ ಸರಿ ಎಂಬುದನ್ನ ಕಾದುನೋಡಬೇಕಿದೆ.