Bengaluru CityCinemaKarnatakaLatestMain PostSandalwoodTV Shows

ʻಬಿಗ್ ಬಾಸ್ʼ ಮನೆಯಿಂದ ನೇಹಾ ಗೌಡ ಔಟ್

ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ನೇಹಾ ಗೌಡ, ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ದೊಡ್ಮನೆಯ ಐದನೇ ಸ್ಪರ್ಧಿಯಾಗಿ ನೇಹಾ ಗೌಡ(Neha Gowda) ಹೊರಬಂದಿದ್ದಾರೆ.

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನೇಹಾ, ಬಿಗ್ ಬಾಸ್ (Bigg Boss) ಮನೆಗೆ ಎಂಟ್ರಿ ಕೊಟ್ಟಿದ್ದರು. ಮನರಂಜನೆ ಮತ್ತು ಟಾಸ್ಕ್ ಗಳಲ್ಲಿ ಸೈ ಎನಿಸಿಕೊಂಡಿದ್ದ ನೇಹಾಗೆ ದೊಡ್ಮನೆಯ ಆಟ ಅಂತ್ಯವಾಗಿದೆ.‌ ಇದನ್ನೂ ಓದಿ:ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು

ಇತ್ತೀಚೆಗೆ ಅರುಣ್ ಸಾಗರ್ (Arun Sagar) ಟಾಸ್ಕ್ ಆಡುವ ಮುನ್ನ ದುರಾಸೆ ಎಂದು ಹೇಳಿದ್ದಕ್ಕೆ ನೇಹಾ ಕ್ಲಾಸ್ ತೆಗೆದುಕೊಂಡಿದ್ದರು. ಈ ಬಗ್ಗೆ ವೀಕೆಂಡ್ ಪಂಚಾಯತಿಯಲ್ಲೂ ನಡೆದಿತ್ತು. ಅಡುಗೆ, ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ನೇಹಾ ಮುಂದಿದ್ದರು.

ಐಶ್ವರ್ಯ, ನವಾಜ್, ದರ್ಶ್‌, ಮಯೂರಿ ನಂತರ ಇದೀಗ ಬಿಗ್ ಬಾಸ್‌ ಮನೆಯಿಂದ ನೇಹಾ ಗೌಡ ಹೊರ ಬಂದಿದ್ದಾರೆ. ಮುಂದಿನ ವಾರ ಇನ್ಯಾವ ಸ್ಪರ್ಧಿ ಹೊರಬರಬಹುದು ಎಂಬ ಕುತೂಹಲ ಈಗಾಗಲೇ ಮನೆ ಮಾಡಿದೆ. ಒಟ್ನಲ್ಲಿ ನೇಹಾ ಗೌಡ ಎಲಿಮಿನೇಷನ್ ಗೊಂಬೆ ಫ್ಯಾನ್ಸ್ ಗೆ ಶಾಕ್ ಕೊಟ್ಟಿದೆ.

Live Tv

Leave a Reply

Your email address will not be published. Required fields are marked *

Back to top button