ಬಿಗ್ ಬಾಸ್ ಮನೆಯ (Bigg Boss House) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. 70 ದಿನಕ್ಕಿಂತ ಅಧಿಕ ದಿನಗಳು ಆಟ ಆಡಿ ಸಂಬರ್ಗಿ ಸೈ ಎನಿಸಿಕೊಂಡಿದ್ದರು. ಈಗ 12ನೇ ವಾರಕ್ಕೆ ಪ್ರಶಾಂತ್ ಸಂಬರ್ಗಿ (Prasahnth Sambargi) ಆಟ ಅಂತ್ಯವಾಗಿದೆ. ಇದೀಗ ವೇದಿಕೆಯ ಮೇಲೆ ಕಿಚ್ಚನ ಜೊತೆ ತಾವು ಎಲಿಮಿನೇಟ್ ಆಗಿರುವುದರ ಬಗ್ಗೆ ಮತ್ತು ಅರುಣ್ ಸಾಗರ್ (Arun Sagar) ಆಟದ ಬಗ್ಗೆ ಸಂಬರ್ಗಿ ಕಣ್ಣೀರಿಟ್ಟಿದ್ದಾರೆ.
Advertisement
ದೊಡ್ಮನೆಯಲ್ಲಿ ಮಾಸ್ಟರ್ ಮೈಂಡ್ ಎಂದು ಗುರುತಿಸಿಕೊಂಡಿರುವ ಪ್ರಶಾಂತ್ ಸಂಬರ್ಗಿ ಇದೀಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ತಮ್ಮ ಎಲಿಮಿನೇಷನ್, ಅರುಣ್ ಸಾಗರ್ ಜೊತೆಗಿನ ನಂಟಿನ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪ್ರಶಾಂತ್ ಮತ್ತು ಅರುಣ್ ಸಾಗರ್ ಸಾಕಷ್ಟು ವರ್ಷಗಳಿಂದ ಸ್ನೇಹಿತರು, ಬಿಗ್ ಬಾಸ್ ಮನೆಗೆ ಬರುವ ಮುಂಚೆಗೆ ಒಬ್ಬರಿಗೊಬ್ಬರು ತಿಳಿದಿದ್ದರು. ಇದೀಗ ಆಟ ಬೇರೇ ಫ್ರೆಂಡ್‌ಶಿಪ್ ಎಂದು ಅರುಣ್ ಸಾಗರ್ ಆಡಿರುವ ಮಾತಿಗೆ ಸಂಬರ್ಗಿ ವೇದಿಕೆಯ ಮೇಲೆ ಭಾವುಕರಾಗಿದ್ದಾರೆ.
Advertisement
Advertisement
ಆಟ ಬೇರೇ ಫ್ರೇಂಡ್‌ಶಿಪ್ ಬೇರೇ ನೀನು ನನ್ನ ಸ್ಪರ್ಧಿ ಎಂದು ಅರುಣ್ ಸಾಗರ್ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಈ ಮಾತನ್ನ ನಾನು ಅರುಣ್ ಕಡೆಯಿಂದ ನಿರೀಕ್ಷೆ ಮಾಡಿರಲಿಲ್ಲ ಎಂದು ಕಿಚ್ಚನ ಮುಂದೆ ಅತ್ತಿದ್ದಾರೆ. ಅರುಣ್ ಸಾಗರ್ ಇದೀಗ ಇರುವ ರೀತಿಯೇ ಬೇರೇ ಎಂದು ಸಂಬರ್ಗಿ ಮಾತನಾಡಿದ್ದಾರೆ. ಇದನ್ನೂ ಓದಿ: `ಕಾಂತಾರ’ ನೋಡಿ ತುಂಬಾ ಕಲಿತೆ: ರಿಷಬ್ ಚಿತ್ರಕ್ಕೆ ಹೃತಿಕ್ ರೋಷನ್ ಮೆಚ್ಚುಗೆ
Advertisement
ಎಲಿಮಿನೇಟ್ ಆಗಿ ಆಚೆ ಬರುವಾಗ ಸಂಬರ್ಗಿ ಭಾವುಕರಾದರು. ಅದರಲ್ಲೂ ಸುದೀಪ್ (Sudeep) ಅವರ ಜೊತೆಗೆ ವೇದಿಕೆ ಮೇಲೆ ಮುಖಾಮುಖಿಯಾದ ಬಿಕ್ಕಿ ಬಿಕ್ಕಿ ಅತ್ತರು. ಅದಕ್ಕೆ ಕಾರಣ, ಅರುಣ್ ಸಾಗರ್. ನಾನು ಆಚೆ ಬಂದಿರುವುದಕ್ಕೆ ಶಾಕ್ ಆಗಿದೆ. ನಾನು ಮನೆಯಲ್ಲಿ ಇದ್ದಾಗ ಅರುಣ್ ಸಾಗರ್ ಕಡೆಯಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆ. ಯಾಕೆಂದರೆ, ಆತ ನನ್ನ 20 ವರ್ಷಗಳ ಸ್ನೇಹಿತ. ಆದರೆ ಬಿಗ್ ಬಾಸ್ ಶೋನಲ್ಲಿ ಎಲ್ಲರೂ ಸ್ಪರ್ಧಿಗಳೇ ಎಂಬಂತೆ ವರ್ತಿಸಿದ. ಅದು ನನಗೆ ನೋವು ತಂದಿತ್ತು. ಹೌದು, ನಾನೇ ಹೇಳಿದ್ದೆ, ಆಟದ ಮುಂದೆ ಯಾವ ಸಂಬಂಧಗಳು ಲೆಕ್ಕಕ್ಕೆ ಬರುವುದಿಲ್ಲ. ಯಾವ ಸ್ನೇಹ ಕೂಡ ಇರುವುದಿಲ್ಲ ಎಂದು. ಆದರೆ ಅದನ್ನು ನನ್ನಿಂದಲೇ ಪಾಲಿಸಲು ಆಗಲಿಲ್ಲ ಎಂದು ಸಂಬರ್ಗಿ ಮಾತನಾಡಿದ್ದಾರೆ.