ಸ್ಯಾಂಡಲ್‌ವುಡ್ ನಟ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ದಾಂಪತ್ಯ ಅಂತ್ಯವಾಗಿದೆ. 2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ (Divorce) ಮಂಜೂರು ಮಾಡಿದೆ. ಈ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾರ 4 ವರ್ಷಗಳ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ.
ಗಾಯಕ ಚಂದನ್ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ವಿಚ್ಚೇಧನಕ್ಕೆ ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್‌ಗೆ ಮುಂದಾಗಿದ್ದರು. 2ನೇ ಹೆಚ್ಚುವರಿ ನ್ಯಾಯಾಲಯ ವಿಚ್ಛೇದನಕ್ಕೆ ಅನುಮತಿ ನೀಡಿದೆ. ಇದನ್ನೂ ಓದಿ:ಚಿರು ಸರ್ಜಾ 4ನೇ ವರ್ಷದ ಪುಣ್ಯ ಸ್ಮರಣೆ- ಕುಟುಂಬಸ್ಥರಿಂದ ಪೂಜೆ
ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಪ್ರೀತಿಸಿ, ಅಲ್ಲಿಂದ ವಾಪಸ್ಸು ಬಂದ ನಂತರ ಅದ್ಧೂರಿಯಾಗಿ ಮದುವೆಯಾಗಿದ್ದರು. ಈ ಇಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಿದ್ದರು ಎನ್ನುವುದಕ್ಕೆ ಅವರೇ ಮಾಡಿಕೊಂಡಿದ್ದ ಹಲವಾರು ರೀಲ್ಸ್ ಸಾಕ್ಷಿಯಾಗಿದ್ದವು. ಈಗ ಡಿವೋರ್ಸ್ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.