ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12ಕ್ಕೆ ನೂರು ದಿನಗಳ (ಜ.6) ಸಂಭ್ರಮ. 100 ದಿನಗಳ ಮಹಾ ಪ್ರಯಾಣದಲ್ಲಿ ಜೊತೆ ನಿಂತು, ಪ್ರೀತಿ ನೀಡಿ ಬೆಂಬಲಿಸಿದ ಕನ್ನಡಿಗರಿಗೆ ಬಿಗ್ ಬಾಸ್ ಧನ್ಯವಾದ ಅರ್ಪಿಸಿದ್ದಾರೆ.
ಸೆ.28 ರಂದು ಬಿಗ್ ಬಾಸ್ ಸೀಸನ್ 12 ಪ್ರಾರಂಭವಾಯಿತು. ಇಂದಿಗೆ ಯಶಸ್ವಿ ಶತದಿನೋತ್ಸವ ಪೂರೈಸಿದೆ. 100 ದಿನಗಳು, 100 ಕಥೆಗಳು, ನೂರಾರು ಭಾವನೆಗಳ ಮಹಾಪ್ರಯಾಣ. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ನೂರು ದಿನಗಳ ಸಂಭ್ರಮದಲ್ಲಿದೆ ಎಂದು ಕಲರ್ಸ್ ಕನ್ನಡ ಪ್ರೋಮೊ ಮೂಲಕ ಖುಷಿ ಹಂಚಿಕೊಂಡಿದೆ. ಇದನ್ನೂ ಓದಿ: ಹೆದರಬೇಡ ಅಪ್ಪಿ ಅಂತಿದ್ರು, ಆದ್ರೆ ಮಾಳು ಸ್ಟೇಟ್ಮೆಂಟ್ ಕೇಳಿ ಅಚ್ಚರಿ ಆಯ್ತು – ಸ್ಪಂದನಾ
100 ದಿನಗಳ ಮಹಾ ಪ್ರಯಾಣದಲ್ಲಿ ಜೊತೆ ನಿಂತು, ಪ್ರೀತಿ ನೀಡಿ ಬೆಂಬಲಿಸಿದ ಕನ್ನಡಿಗರಿಗೆ ಥ್ಯಾಂಕ್ಯೂ😍🙏🏻
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKEngage pic.twitter.com/g1WDPXVrIe
— Colors Kannada (@ColorsKannada) January 6, 2026
ಪ್ರತಿ ದಿನ ಹೊಸ ಪಾಠ, ಹೊಸ ಟ್ವಿಸ್ಟ್, ಹೊಸ ಎಮೊಷನ್ಸ್.. ಉಳಿದವರು ಕೆಲಸವರು, ಹೊರ ಹೋದವರು ಕೆಲವರು. ಇಲ್ಲಿ ಕಳೆದ, ಉಳಿಯದ, ಅಳಿದ ನೆನಪುಗಳು ಅದೆಷ್ಟೋ. ನಗುವಿನಿಂದ ಕಣ್ಣೀರಿನವರೆಗೂ, ಸ್ನೇಹದಿಂದ ಸಂಘರ್ಷದವರೆಗೂ. ಸ್ಟ್ರ್ಯಾಟಜಿಯಿಂದ ಸವಾಲಿನವರೆಗೂ ಸ್ಪರ್ಧಿಗಳೊಟ್ಟಿಗೆ ಕನ್ನಡಿಗರು ಒಬ್ಬರಾಗಿ ಜೀವಿಸಿದ್ದಾರೆ. ಆಟ ಇಲ್ಲಿಗೆ ಮುಗಿದಿಲ್ಲ. ವ್ಯಕ್ತಿತ್ವದ ಅಸಲಿ ಆಟದಲ್ಲಿ ಮುಂದೆ ಇನ್ನಷ್ಟು ಅಚ್ಚರಿ, ಇನ್ನಷ್ಟು ಅನುಭವಗಳು ನಿಮಗಾಗಿ ಕಾದಿದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ.
ಇದೇ ಜನವರಿ 17 ಮತ್ತು 18 ರಂದು ಫಿನಾಲೆ ನಡೆಯಲಿದೆ. ಬಿಗ್ ಮನೆಯಲ್ಲಿ ಈಗ 8 ಸ್ಪರ್ಧಿಗಳು ಉಳಿದಿದ್ದಾರೆ. ಅವರ ಪೈಕಿ 5-6 ಸ್ಪರ್ಧಿಗಳು ಮಾತ್ರ ಫಿನಾಲೆಗೆ ಹೋಗಲಿದ್ದು, ಅದಕ್ಕೂ ಮುನ್ನ ಎಲಿಮಿನೇಷನ್‌ಗಳು ನಡೆಯಲಿವೆ. ಬಿಗ್ ಬಾಸ್ ವಿನ್ನರ್‌ಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ. ಇದನ್ನೂ ಓದಿ: `ಗಿಲ್ಲಿನೇ ಗೆಲ್ಬೇಕು, ಗಿಲ್ಲಿನೇ ಗೆಲ್ಲೋದು’ ಎಂದ ಸ್ಪಂದನ

