‘ಬಿಗ್ ಬಾಸ್ ಕನ್ನಡ 10′ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಬಿಗ್ ಬಾಸ್ ಕನ್ನಡ 10 ಶೋ ಮುಗಿದು 7 ತಿಂಗಳ ನಂತರ ದೊಡ್ಮನೆ ಆಟದಲ್ಲಿ ಗೆದ್ದ ಕಾರು ಈಗ ಸಿಕ್ಕಿದೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲಿ ಗೆದ್ದ ಸ್ಪರ್ಧಿಗೆ 50 ಲಕ್ಷ ರೂ. ನಗದು, ವಿನ್ನರ್ ಟ್ರೋಫಿಯನ್ನು ನೀಡಿದ್ದರು. ಇದರ ಜೊತೆಗೆ ಮಾರುತಿ ಸುಜುಕಿ ಬ್ರೇಝಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ನರ್‌ಗೆ ನೀಡೋದಾಗಿ ಘೋಷಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಇಂದು (ಆ.28) ಬಿಗ್ ಬಾಸ್ ತಂಡವು ಕಾರ್ತಿಕ್‌ಗೆ ಮಾರುತಿ ಸುಜುಕಿ ಬ್ರೇಝಾ ಕಾರನ್ನು ಹಸ್ತಾಂತರಿಸಿದ್ದಾರೆ.
ಮಾರುತಿ ಸುಜುಕಿ ಬ್ರೇಝಾ ಕಾರಿನ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಅಂತು ಇಂತು ಬಂತು ಬಿಗ್ ಬಾಸ್ ಕಾರು’ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ. ಕಾರು ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ
ಇನ್ನೂ ಸಾಮಾನ್ಯವಾಗಿ ಹೊಸ ಮಾರುತಿ ಸುಜುಕಿ ಬ್ರೇಝಾ ಕಾರು ಬುಕ್ ಮಾಡಿದ ಮೇಲೆ ಡೆಲಿವೆರಿ ಮಾಡೋಕೆ 6-7 ತಿಂಗಳು ಬೇಕಾಗುತ್ತದೆ. ಹಾಗಾಗಿ ಕಾರ್ತಿಕ್‌ಗೆ ಕಾರು ತಡವಾಗಿ ಸಿಕ್ಕಿದೆ. ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ‘ರಾಮರಸ’ ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಲವು ಪ್ರಾಜೆಕ್ಟ್‌ಗಳಿವೆ.