‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಮೂಲಕ ಮನೆ ಮಾತಾದ ನಟಿ ಸಿರಿ (Siri) ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕಿರುತೆರೆಯಿಂದ ದೂರ ಉಳಿದುಕೊಂಡಿದ್ದ ನಟಿ ಮತ್ತೆ ಟಿವಿ ಪರದೆಗೆ ರೀ ಎಂಟ್ರಿ ಕೊಟ್ಟಿದ್ದಾರೆ.
ಕಿರುತೆರೆಯ ಜನಪ್ರಿಯ ಧಾರಾವಾಹಿ ‘ರಂಗೋಲಿ’ ಮೂಲಕ ಮನೆ ಮಾತಾದ ನಟಿ ಸಿರಿ ಕಡೆಯದಾಗಿ ‘ರಾಮಾಚಾರಿ’ ಸೀರಿಯಲ್ ಕಾಣಿಸಿಕೊಂಡಿದ್ದರು. ಬಳಿಕ ಈ ವರ್ಷದ ‘ಬಿಗ್ ಬಾಸ್’ ಶೋನಲ್ಲಿ ಸಿರಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಇದೀಗ ಸಮಯದ ಬಳಿಕ ಚುಕ್ಕಿ ತಾರೆ ಸೀರಿಯಲ್ ಮೂಲಕ ನಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಸದ್ಯ ಸಿರಿ ಅವರ ಪಾತ್ರದ ಶೂಟಿಂಗ್ ನಡೆಯುತ್ತಿದ್ದು, ಚುಕ್ಕಿ-ಇಬ್ಬನಿಗೆ ದಾರಿ ತೋರಿ ರಕ್ಷಿಸೋ ವಿಶಿಷ್ಟ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನೂ ಚುಕ್ಕಿ ಅಪ್ಪನನ್ನ (ಹೀರೋ ನವೀನ್ ಸಜ್ಜು) ಕಳೆದುಕೊಂಡ ನೋವಲ್ಲಿದ್ದಾಳೆ. ಸ್ನೇಹಿತೆಗೆ ಸಹಾಯ ಮಾಡಲು ಇಬ್ಬನಿ ಕೂಡ ಬಂದಿದ್ದಾಳೆ. ಇದೀಗ ಕಥೆಯಲ್ಲಿ ಸಿರಿ ಅತಿಥಿ ಪಾತ್ರ ಹೊಸ ತಿರುವು ಕೊಡಲಿದೆ.
ಅಂದಹಾಗೆ, ಇತ್ತೀಚೆಗೆ ‘ಚುಕ್ಕಿತಾರೆ’ ಸೀರಿಯಲ್‌ನಲ್ಲಿ ವಿನಯ್ ಗೌಡ ದಂಪತಿ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ವಿಶೇಷ ಎಪಿಸೋಡ್ ನೋಡುಗರ ಗಮನ ಸೆಳೆದಿತ್ತು.