ಬಿಗ್ಬಾಸ್ನ(Bigg Boss) ಲವ್ ಬರ್ಡ್ಸ್ ಆಗಿರುವ ರೂಪೇಶ್(Roopesh Shetty) ಮತ್ತು ಸಾನ್ಯಾಳ (Sanya Iyer) ಆತ್ಮೀಯತೆ ಮತ್ತಷ್ಟು ಹೆಚ್ಚಾಗಿದೆ. ಓಟಿಟಿಯಿಂದ ಶುರುವಾದ ಸ್ನೇಹ ಟಿವಿ ಬಿಗ್ಬಾಸ್ನಲ್ಲೂ ಮುಂದುವರೆದಿದೆ. ಸದ್ಯ ಮಿಡ್ ನೈಟ್ನಲ್ಲಿ ಸಾನ್ಯಾಳನ್ನು ರೂಪೇಶ್ ತಬ್ಬಿಕೊಂಡಿದ್ದಾರೆ.
Advertisement
ದೊಡ್ಮನೆಯ ಹೈಲೆಟ್ ಆಗಿರುವ ಸಾನ್ಯಾ, ರೂಪೇಶ್ ಸದಾ ಒಂದಲ್ಲಾ ಒಂದು ವಿಷಯವಾಗಿ ಸುದ್ದಿಯಾಗುತ್ತಾರೆ. ವಾರಾಂತ್ಯದಲ್ಲಿ ರೂಪೇಶ್ಗೆ ಹುಡುಗಿಯರ ಯುನಿವರ್ಸಿಟಿ ಎಂದು ಕಿಚ್ಚ ಕಾಲೆಳೆದಿದ್ದರು. ಈ ಬೆನ್ನಲ್ಲೇ ಇದೀಗ ಮಧ್ಯರಾತ್ರಿ ಸಾನ್ಯಾಳ ಆಜ್ಞೆಯಂತೆ ರೂಪೇಶ್ ತಬ್ಬಿಕೊಂಡಿದ್ದಾರೆ.
Advertisement
Advertisement
ರೂಪೇಶ್ ಮತ್ತು ಸಾನ್ಯಾಳ ಆತ್ಮೀಯತೆ ಸ್ನೇಹಕ್ಕೂ ಮೀರಿ ನಿಂತಿದೆ. ನಮ್ಮ ನಡುವೆ ಏನಿಲ್ಲ, ನಾವಿಬ್ಬರೂ ಫ್ರೆಂಡ್ಸ್ ಏನುತ್ತಿದ್ದ ಜೋಡಿ ಪ್ರೇಮಿಗಳಾಗುವ ಲಕ್ಷ್ಮಣ ತೋರಿಬರುತ್ತಿದೆ. ಮಧ್ಯರಾತ್ರಿ ಸನ್ನೆ ಭಾಷೆಯಲ್ಲಿ ಇಬ್ಬರೂ ಗುಸು ಗುಸು ಅಂತಾ ಮಾತನಾಡಿದ್ದಾರೆ. ನಂತರ ಸಾನ್ಯಾಳನ್ನ ರೂಪೇಶ್ ತಬ್ಬಿಕೊಂಡಿದ್ದಾರೆ. ಇದು ಅಷ್ಟಕ್ಕೆ ನಿಂತಿಲ್ಲ. ಮರುದಿನ ಯಾಕೆ ನನ್ನ ತಬ್ಬಿಕೊಂಡಿಲ್ಲ ಪ್ರತಿದಿನ ರಾತ್ರಿ ನನಗೆ ಹಗ್ ಕೊಟ್ಟು ಮಲಗಬೇಕು ಅಂತಾ ಹೇಳಿದ್ದೆ ಅಲ್ವಾ ಅಂತಾ ರೂಪೇಶ್ಗೆ ಸಾನ್ಯಾ ಕ್ಲಾಸ್ ತಗೊಂಡಿದ್ದಾರೆ. ಇದನ್ನೂ ಓದಿ: ನಟಿ ನಯನತಾರ ಬಾಡಿಗೆ ತಾಯ್ತನದ ಮಗು: ತನಿಖೆಗೆ ಆದೇಶಿಸಿದ ತಮಿಳು ನಾಡು ಸರಕಾರ
Advertisement
ಬೆಳಿಗ್ಗೆ ವರ್ಕೌಟ್ ಮಾಡುವ ಸಂದರ್ಭದಲ್ಲೂ ಸಾನ್ಯಾಳನ್ನು ರೂಪೇಶ್ ಮತ್ತೆ ಎತ್ತಿಕೊಂಡಿದ್ದಾರೆ. ಹೀಗೆ ಸಾಕಷ್ಟು ಕ್ಯೂಟ್ ವಿಚಾರಗಳಿಂದ ಚೆಂದದ ಜೋಡಿಯಾಗಿ ಸಾನ್ಯಾ ಮತ್ತು ರೂಪೇಶ್ ಜೋಡಿ ಹೈಲೈಟ್ ಆಗುತ್ತಿದೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಎಂಬುದನ್ನ ಕಾದುನೋಡಬೇಕಿದೆ.