Bengaluru CityCinemaKarnatakaLatestMain PostSandalwoodTV Shows

ಅನುಪಮಾ ಮನೆಯ ಜಾಮೂನ್ ಗುಳುಂ: ರೂಪೇಶ್ ಶೆಟ್ಟಿಗೆ ಸಾನ್ಯ ಕ್ಲಾಸ್

ದೊಡ್ಮನೆಯ ಆಟದ ರಂಗು ದಿನದಿಂದ ದಿನಕ್ಕೆ ಸಾಕಷ್ಟು ರೋಚಕ ತಿರುವುಗಳನ್ನ ಪಡೆಯುತ್ತಿದೆ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪರ್ಧಿಗಳಿಗೆ ಅವರ ಮನೆಯವರಿಂದ ಚೆಂದದ ಗಿಫ್ಟ್‌ಗಳನ್ನ ಕೊಡಲಾಗಿದೆ. ಅನುಪಮಾ ಅವರಿಗೆ ಮನೆಯಿಂದ ಜಾಮೂನ್ ಕಳುಹಿಸಿದ್ದರು. ಇದನ್ನ ರೂಪೇಶ್ ಶೆಟ್ಟಿ(Roopesh Shetty) ಖಾಲಿ ಮಾಡಿದ್ದಕ್ಕೆ ಸಾನ್ಯ(Sanya Iyer) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ (Bigg Boss House) ಮನೆಯಲ್ಲಿ ಸಾನ್ಯ ಅಯ್ಯರ್ ಕ್ಯಾಪ್ಟನ್ ಆಗಿ ಮಿಂಚ್ತಿದ್ದಾರೆ. ದೊಡ್ಮನೆಯಲ್ಲಿ ಹಬ್ಬದ ಖುಷಿ, ಸಡಗರ ಮನೆ ಮಾಡಿದೆ. ಹಬ್ಬದ ಶುಭ ಸಂದರ್ಭದಲ್ಲಿ ಬಿಗ್‌ ಬಾಸ್ ಟ್ವಿಸ್ಟ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನ ಗೆದ್ದು ಸ್ಪರ್ಧಿಗಳ ಮನೆಯಿಂದ ಬಂದಿರುವ ಗಿಫ್ಟ್‌ ಪಡೆಯುವ ಸವಾಲಿತ್ತು. ಅದರಂತೆ ಕ್ಯಾಪ್ಟೆನ್ಸಿ ಅಗ್ನಿ ಪರೀಕ್ಷೆ ಕೂಡ ನಡೆಯುತ್ತಿದೆ. ಅದರಂತೆ ಅನುಪಮಾ ಕೂಡ ಟಾಸ್ಕ್ ಪೂರ್ಣಗೊಳಿಸಿ, ಮನೆಯಿಂದ ಬಂದ ಜಾಮೂನ್ ತಮ್ಮದಾಗಿಸಿಕೊಂಡಿದ್ದರು.

ಅನುಪಮಾ(Anupama Gowda)  ದೊಡ್ಮನೆಯಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್‌ಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅನುಪಮಾಗೆ ಬಂದಿರುವ ಜಾಮೂನ್ ಅನ್ನು ರೂಪೇಶ್ ಶೆಟ್ಟಿ ಕದ್ದು ತಿಂದಿದ್ದಾರೆ. ಅನುಪಮಾ ಬಂದು ವಿಚಾರಿಸಿದಾಗ ರೂಪೇಶ್ ತಿಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ವಿಚಾರ ಸಾನ್ಯ ಗಮನಕ್ಕೂ ಬಂದಿದ್ದು, ಸಾನ್ಯ ರೂಪೇಶ್‌ಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಗಂಧದ ಗುಡಿ ಅಬ್ಬರದ ನಡುವೆಯೂ ‘ಕಾಂತಾರ’ ಹೌಸ್ ಫುಲ್

ಜಾಮೂನ್ ಅನುಪಮಾ ತಿನ್ನಲಿ ಎಂದು ಅವರು ಮನೆಯವರು ಕಳುಹಿಸಿರುತ್ತಾರೆ. ನೀವು ಯಾಕೆ ತಿಂದಿದ್ದು, ತಪ್ಪು ಅಲ್ವಾ ಎಂದು ಸಾನ್ಯ ರೂಪೇಶ್ ಮೇಲೆ ಗರಂ ಆಗಿದ್ದಾರೆ. ಇನ್ನೂ ಕಳೆದ ವಾರ ಸುದೀಪ್ ಅನುಪಸ್ಥಿತಿಯಲ್ಲಿ ಮಯೂರಿ ಎಲಿಮಿನೇಟ್ ಆಗಿದ್ದರು. ಈ ವಾರ ಯಾವ ಸ್ಪರ್ಧಿ ಹೊರ ಬರಲಿದ್ದಾರೆ ಎಂಬುದರ ಬಗ್ಗೆ ಕ್ಯೂರಿಯಸ್ ಆಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button