ಬಿಗ್ ಬಾಸ್ (Bigg Boss) ಫಿನಾಲೆಗೆ ನಾಲ್ಕೇ ನಾಲ್ಕು ದಿನ ಬಾಕಿಯಿದೆ. ಅಂತಿಮ ಹಂತದಲ್ಲಿರುವ ಬಿಗ್ ಬಾಸ್ ಮನೆಯ ಆಟ (Bigg Boss House) ಸಾಕಷ್ಟು ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಈ ವೇಳೆ ರೂಪೇಶ್ ಶೆಟ್ಟಿಗೆ (Roopesh Shetty) ಬಿಗ್ ಬಾಸ್ ಸರ್ಪ್ರೈಸ್ ನೀಡಿದ್ದಾರೆ. ಈ ಗಿಫ್ಟ್ ನೋಡಿ ರೂಪೇಶ್ ಕುಣಿದು ಕುಪ್ಪಳಿಸಿದ್ದಾರೆ.
ತುಳುನಾಡಿನಲ್ಲಿ ರಾಕ್ ಸ್ಟಾರ್ ಗುರುತಿಸಿಕೊಂಡಿರುವ ರೂಪೇಶ್ ಶೆಟ್ಟಿ, ಸಾಕಷ್ಟು ತುಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೂಲತಃ ಕರಾವಳಿಗನಾಗಿರುವುದರಿಂದ ತುಳುವಿನ ಹಲವು ಬಗೆಯ ಪಾತ್ರಗಳಿಗೆ ಜೀವತುಂಬಿದ್ದಾರೆ. ರೂಪೇಶ್ ನಟನೆಯ 2019ರ ‘ಗಿರಿಗಿಟ್’ (Girgit) ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಿಂದ ರೂಪೇಶ್ ಶೆಟ್ಟಿ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಈ ಚಿತ್ರದ ಹಾಡುಗಳು ಕೂಡ ತುಳುನಾಡಲ್ಲಿ ಹಿಟ್ ಆಗಿದೆ. ಈ ಸಿನಿಮಾ ಹಾಡನ್ನು ಸೋಮವಾರದ (ಡಿ.26) ಎಪಿಸೋಡ್‌ನಲ್ಲಿ ವೇಕಪ್ ಸಾಂಗ್ ಆಗಿ ಪ್ಲೇ ಮಾಡಲಾಗಿದೆ.
ಮುಂಜಾನೆ ಈ ಹಾಡು ಕೇಳಿ ರೂಪೇಶ್ ಶೆಟ್ಟಿ ಸಖತ್ ಖುಷಿ ಆಗಿದ್ದಾರೆ. ಅವರು ಎದ್ದು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ರೂಪೇಶ್ ಜೊತೆ ಮನೆ ಮಂದಿ ಕೂಡ ಹೆಜ್ಜೆ ಹಾಕಿದ್ದಾರೆ. ಥ್ಯಾಂಕ್ಸ್ ಬಿಗ್ ಬಾಸ್. ನನ್ನ ವೃತ್ತಿ ಜೀವನ ಬದಲಿಸಿದ ಸಿನಿಮಾ ‘ಗಿರಿಗಿಟ್’. ಈ ಚಿತ್ರದ ಹಾಡನ್ನು ಹಾಕಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ತುಳು ಸಿನಿಮಾ ಸಾಂಗ್ ದೊಡ್ಮನೆಯಲ್ಲಿ ಪ್ಲೇ ಆಗಬೇಕು ಎಂಬ ಆಸೆಯಿತ್ತು. ಈ ಬಗ್ಗೆ ಈ ಹಿಂದೆಯೇ ಮನವಿ ಮಾಡಿದ್ದರು. ಬಿಗ್ ಬಾಸ್ ಇತಿಹಾಸದಲ್ಲೇ ಪ್ಲೇ ಆಗಿರುವ ಗಿರಿಗಿಟ್ ಚಿತ್ರದ ಮೊದಲ ತುಳು ಸಾಂಗ್ ಇದಾಗಿದೆ. ಇದನ್ನೂ ಓದಿ: ನಡುರಾತ್ರಿಯಲ್ಲಿ ಎಲಿಮಿನೇಷನ್: ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಔಟ್
ಇನ್ನೂ ಇದೀಗ ಆರು ಜನ ಸ್ಪರ್ಧಿಗಳಿದ್ದ ಮನೆಯಲ್ಲಿ ಮಿಡ್‌ನೈಟ್ ಎಲಿಮಿನೇಷನ್ (Elimination) ಆಗಿದೆ. ಆರ್ಯವರ್ಧನ್ ಗುರೂಜಿ (Aryavardhan Guruji) ಮನೆಯಿಂದ ಹೊರಬಂದಿದ್ದಾರೆ. ಮಿಡ್‌ನೈಟ್ ಎಲಿಮಿನೇಷನ್ ಮೂಲಕ ಗುರೂಜಿ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.