Bengaluru CityCinemaDistrictsKarnatakaLatestMain PostSandalwood

ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ರೂಪೇಶ್ ರಾಜಣ್ಣ ಕಿರಿಕ್

ದೊಡ್ಮನೆಯ ವಾತಾವರಣ ಬದಲಾಗಿದೆ. ದಿನದಿಂದ ದಿನಕ್ಕೆ ಮನೆಯವರ ಜಗಳ, ಹಾರಾಟ, ಹೋರಾಟ ಎಲ್ಲವೂ ಜೋರಾಗುತ್ತಿದೆ. ಬಿಗ್ ಬಾಸ್ ಮನೆ ಇದೀಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಗೊಂಬೆಗಳನ್ನ ಮಾಡುವ ಟಾಸ್ಕ್‌ನಲ್ಲಿ ರೂಪೇಶ್ ರಾಜಣ್ಣ ವರ್ತನೆಯಿಂದ ತನ್ನ ತಂಡಕ್ಕೆ ಕುತ್ತು ತಂದಿದ್ದಾರೆ. ರಾಜಣ್ಣನ ನಡೆಯಿಂದ ಮನೆ ಮಂದಿ ಕೆಂಡಾಮಂಡಲ ಆಗಿದ್ದಾರೆ.

ದೊಡ್ಮನೆ ಆಟ ಸಾಕಷ್ಟು ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಬಿಗ್ ಬಾಸ್(Bigg Boss House) ಭಿನ್ನ ಟಾಸ್ಕ್ ಕೊಡುವುದರಲ್ಲಿ ಯಾವಾಗಲೂ ಮುಂದು. ಈ ಬಾರಿ ಕೆಂಪು ಮತ್ತು ಹಸಿರು ಗಂಪುಗಳನ್ನಾಗಿ ಮಾಡಿ, ಟಾಯ್ ಫ್ಯಾಕ್ಟರಿ ಟಾಸ್ಕ್ ನೀಡಲಾಗಿತ್ತು. ಇದರಲ್ಲಿ ರೂಪೇಶ್ ರಾಜಣ್ಣ(Roopesh Rajanna) ಮಾಡಿದ್ದ ಒಂದು ತಪ್ಪಿನಿಂದ ತನ್ನ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದಾರೆ. ಈ ವಿಷ್ಯ ಮನೆಯ ಕಲಹಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡುವತ್ತ `ಕಾಂತಾರ’

ಈ ಟಾಸ್ಕ್ ಆಡುವಾಗ ಬಿಗ್ ಬಾಸ್ (Bigg Boss) ಕೊಟ್ಟಿರುವ ನಿಯಮಗಳನ್ನ ಪಾಲಿಸುವುದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮದೇ ನಿಯಮಗಳನ್ನ ಸ್ಪರ್ಧಿಗಳು ರೂಪಿಸಿಕೊಂಡಿದ್ದಾರೆ. ಗೊಂಬೆ ತಯಾರಿಸುವ ಟಾಸ್ಕ್‌ಲ್ಲಿ ತಮ್ಮ ತಮ್ಮ ಗೊಂಬೆಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ(Responsibility) ಆಯಾ ತಂಡಗಳದ್ದು ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಷ್ಟಕ್ಕೆ ಕಿತ್ತುಕೊಳ್ಳೋದು ಬೇಡ, ವೈಲೆನ್ಸ್ ಬೇಡ, ಯಾರೂ ಇಲ್ಲದಾಗ ಕದಿಯಬಹುದು ಅಂತೆಲ್ಲಾ ಸ್ಪರ್ಧಿಗಳು ತಮಗೆ ತಾವೇ ರೂಲ್ಸ್ ಹಾಕಿಕೊಂಡರು. ಆದರೆ ಅದನ್ನ ಯಾರೂ ಫಾಲೋ ಮಾಡುತ್ತಿರಲಿಲ್ಲ. ಬಳಿಕ, ಯಾರು ಯಾವಾಗ ಹೇಗೆ ಬೇಕಾದರೂ ಗೊಂಬೆಗಳನ್ನ, ಸಾಮಾಗ್ರಿಗಳನ್ನ ಎತ್ತಿಕೊಳ್ಳಬಹುದು ಎಂಬ ನಿಯಮವನ್ನ ಸ್ಪರ್ಧಿಗಳೇ ಜಾರಿಗೊಳಿಸಿದರು. ಈ ನಿಯಮದ ಪ್ರಕಾರ ಎದುರಾಳಿ ಹಸಿರು ಬಣ್ಣದ ತಂಡದಲ್ಲಿದ್ದ ರಿಬ್ಬನ್‌ಗೆ ರೂಪೇಶ್ ರಾಜಣ್ಣ ಕೈಹಾಕಿದರು. ಆ ವೇಳೆ ಬಿಗ್ ಬಾಸ್ ಮನೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು. ಇದನ್ನೂ ಓದಿ:ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ `ಕಾಂತಾರ’ ನಟಿ ಸಪ್ತಮಿ ಭೇಟಿ

ರಿಬ್ಬನ್‌ಗೆ ರೂಪೇಶ್ ರಾಜಣ್ಣ ಕೈಹಾಕಿದಾಗ, ಕೆಂಪು ಬಣ್ಣದ ತಂಡದ ಬಳಿಯಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಪ್ರಶಾಂತ್ ಸಂಬರಗಿ ಅಗ್ರೆಸ್ಸಿವ್ ಆಗಿ ಕೆಂಪು ತಂಡದ ವಸ್ತುಗಳನ್ನೆಲ್ಲಾ ಎಸೆದರು. ತಯಾರಾಗಿದ್ದ ಮೂರು ಗೊಂಬೆಗಳನ್ನು ಹಸಿರು ತಂಡ ಎತ್ತಿಕೊಂಡುಬಿಟ್ಟರು. ಇದರಿಂದ ಕೆಂಪು ಬಣ್ಣದ ತಂಡದ ಸದಸ್ಯರು ರೂಪೇಶ್ ರಾಜಣ್ಣ ವಿರುದ್ಧ ಸಿಡಿಮಿಡಿಗೊಂಡರು. ಈ ವೇಳೆ ಎರಡು ತಂಡದ ನಡುವೆ ಮಾತಿನ ಚಕಮಕಿ ಜೋರಾಗಿದೆ. ಬಳಿಕ 2 ತಂಡ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಗ್ ಬಾಸ್ ಶಿಕ್ಷೆ ಕೊಟ್ಟಿದ್ದಾರೆ. ಎರಡು ತಂಡದಿಂದ ಒಬ್ಬೊಬ್ಬ ಸ್ಪರ್ಧಿಯನ್ನು ತೆಗೆದು ಹಾಕಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button