ಬಿಗ್ ಬಾಸ್ ಮನೆಯ (Bigg Boss House) ಆಟ ಈಗ 12 ವಾರಗಳನ್ನ ಪೂರೈಸಿ 13ನೇ ವಾರದತ್ತ ಮುನ್ನುಗ್ಗುತ್ತಿದೆ. ರೂಪೇಶ್ ಶೆಟ್ಟಿ ಕ್ಯಾಪ್ಟೆನ್ಸಿಯ ಟಾಸ್ಕೊಂದರಲ್ಲಿ ಕಲರ್ ಕಾಂಪ್ಲಿಕೇಶನ್‌ನಿಂದ ದೀಪಿಕಾ ದಾಸ್ (Deepika Das) ಮತ್ತು ರೂಪೇಶ್ ರಾಜಣ್ಣ (Roopesh Rajanna) ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ದೀಪಿಕಾಗೆ ರಾಜಣ್ಣ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.
ದೊಡ್ಮನೆಯಲ್ಲಿ ಹೊಸ ಬಗೆಯ ಟಾಸ್ಕ್ ಕೊಡುವುದರಲ್ಲಿ ಬಿಗ್ ಬಾಸ್ (Bigg Boss) ಯಾವಾಗಲೂ ಮುಂದು. 13ನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ವಿಭಿನ್ನವಾಗಿರುವ ಟಾಸ್ಕ್ ಕೊಟ್ಟಿದ್ದಾರೆ. ಟಾಸ್ಕ್‌ವೊಂದರಲ್ಲಿ ಭಿನ್ನ ಬಗೆಯ ಕಲರ್ ಬಾಕ್ಸ್ ಜೋಡಿಸಬೇಕು. ಒಂದು ಸಲ ಜೋಡಿಸಿರುವ ಕಲರ್ ಮತ್ತೆ ಜೋಡಿಸಬಾರದು ಎಂಬ ನಿಯಮವಿತ್ತು. ಈ ವೇಳೆ ಇತರೆ ಸ್ಪರ್ಧಿಗಳಿಗೆ ಪೈಪೋಟಿ ಕೊಟ್ಟು ರಾಜಣ್ಣ ಗೆದ್ದಿದ್ದರು. ಇದನ್ನೂ ಓದಿ: ಹೊಸ ಉದ್ಯಮ ಕ್ಷೇತ್ರದತ್ತ ಶಾರುಖ್ ಪುತ್ರ ಆರ್ಯನ್ ಖಾನ್
ಕಲರ್ ಬಾಕ್ಸ್‌ಗಳನ್ನ ಪಟ್ ಅಂತಾ ಇತರೆ ಸ್ಪರ್ಧಿಗಳ ಎದುರು ರಾಜಣ್ಣ ಬೇಗ ಜೋಡಿಸಿದ್ದರು. ಈ ವೇಳೆ ಅವರ ಗೆಲುವಿಗೆ ಬೈ ಮಿಸ್ಟೇಕ್ ರಾಜಣ್ಣ ಜೋಡಿಸಿದ್ದಾರೆ. ಆದರಿಂದ ಅವರು ಗೆದ್ದಿದ್ದಾರೆ ಎಂಬ ಮಾತನ್ನ ದೀಪಿಕಾ ಆಡಿದ್ದಾರೆ. ಬೈ ಮಿಸ್ಟೇಕ್‌ನಿಂದ ಮ್ಯಾಚ್ ಆಗಿದೆ ಎಂದಿದ್ದಾರೆ. ದೀಪಿಕಾ ಮಾತಿಗೆ ಪ್ರತಿಯುತ್ತರವಾಗಿ ಯೋಚನೆ ಮಾಡಿ, ಬಾಕ್ಸ್ ಇಟ್ಟಿದ್ದೇನೆ ಎಂದು ರಾಜಣ್ಣ ಗರಂ ಆಗಿದ್ದಾರೆ.
ಬೈ ಮಿಸ್ಟೇಕ್ ಈ ತರಹ ಐಡಿಯಾ ಸಿಕ್ತು ಎಂದು ಮಾತಿಗೆ, ಅಲ್ಲಿಂದ ಕಲರ್ ಬಾಕ್ಸ್ ತರೋದು ಬೈ ಮಿಸ್ಟೇಕ್ ಅಲ್ಲ. ನನ್ನ ಪ್ರಯತ್ನವನ್ನ ಬೈ ಮಿಸ್ಟೇಕ್ ಎನ್ನುತ್ತೀದ್ದೀರಾ ನೀವು ಎಂದು ದೀಪಿಕಾಗೆ ರೂಪೇಶ್ ರಾಜಣ್ಣ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.