ಬಿಗ್ ಬಾಸ್ ಮನೆಯಲ್ಲಿ(Bigg Boss House) ಸದಾ ಒಂದಲ್ಲಾ ಒಂದು ವಿಷಯಕ್ಕೆ ಪ್ರಶಾಂತ್ ಸಂಬರ್ಗಿ ಕಿರಿಕ್ ಮಾಡುತ್ತಲೇ ಇರುತ್ತಾರೆ. ಈ ವಾರ ರೂಪೇಶ್ ಶೆಟ್ಟಿ (Roopesh Shetty) ಶರ್ಟ್ ಹರಿದು, ಮನೆಯಲ್ಲಿ ರಣರಂಗವೇ ಮಾಡಿದ್ದರು. ಈ ಎಲ್ಲದರ ಪರಿಣಾಮ ಸಂಬರ್ಗಿಗೆ ಮನೆಮಂದಿ ಶಿಕ್ಷೆ ನೀಡಿದ್ದಾರೆ.
ದೊಡ್ಮನೆಯ ಸೀಸನ್ 8ರಲ್ಲಿ ಕೂಡ ಪ್ರಶಾಂತ್ ಸಂಬರ್ಗಿ ಸ್ಪರ್ಧಿಯಾಗಿದ್ದರು. ಕಳೆದ ಸೀಸನ್‌ನಿಂದಲೂ ಅಗ್ರೇಸಿವ್ ಆಗಿ ಆಡುತ್ತಲೇ ಬಂದಿದ್ದರು. ಈಗ ಈಗೀನ ಬಿಗ್ ಬಾಸ್‌ನಲ್ಲಿಯೂ ಕೂಡ ಅದೇ ಚಾಳಿ ಮುಂದುವರೆಸಿದ್ದಾರೆ. ದೊಡ್ಮನೆ ಆಟ 55 ದಿನಗಳನ್ನ ಪೂರೈಸಿದೆ. ಬಂದ ದಿನದಿಂದಲೂ ಕಿರಿಕ್ ಮೇಲೆ ಕಿರಿಕ್ ಮಾಡುತ್ತಲೇ ಬಂದಿದ್ದಾರೆ. ಕಳೆದ ಬಾರಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡುವ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು ಇದೆ. ಬಳಿಕ ರೂಪೇಶ್ ಶೆಟ್ಟಿ ಶರ್ಟ್ ಕಿತ್ತೆಸೆದು ಮನೆಯಲ್ಲಿ ರಣರಂಗವೇ ಸೃಷ್ಟಿಯಾಗಿತ್ತು. ಈಗ ಸಂಬರ್ಗಿ ಆಟಕ್ಕೆ ಮನೆಮಂದಿ ಕಳಪೆ ಎಂದಿದ್ದಾರೆ. ಇದನ್ನೂ ಓದಿ:ನಾವು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ಪ್ರಿಯಾಂಕಾ ಚೋಪ್ರಾ
ಎಲ್ಲೂ ಕೂಡ ಸಂಬರ್ಗಿ ಮಾಸ್ಟರ್ ಪ್ಲ್ಯಾನ್ ವರ್ಕ್ ಔಟ್ ಆಗತ್ತಾಯಿಲ್ಲ. ಕಿರಿಕ್ ಮಾಡಿದ್ರೆನೇ ಇಲ್ಲಿ ಬದಕಲು ಸಾಧ್ಯ ಎಂಬಂತೆ ಆಗಾಗ ಮನೆಯ ವಾತಾವರಣವನ್ನ ವಿಕೋಪಕ್ಕೆ ತಂದಿದ್ದಾರೆ. ಈ ಎಲ್ಲದರ ಪರಿಣಾಮ ಪ್ರಶಾಂತ್‌ಗೆ ಕಳಪೆ ಹಣೆಪಟ್ಟಿ ಕೊಟ್ಟು ಜೈಲಿಗೆ ಓಡಿಸಿದ್ದಾರೆ. ಮಾಡಿದ ತಪ್ಪಿಗೆ ಶಿಕ್ಷೆ ಕೊಟ್ರು ಕೂಡ ಅದನ್ನ ಒಪ್ಪಿಕೊಳ್ಳದೇ ಜೈಲಿನಲ್ಲಿಯೂ ಸಂಬರ್ಗಿ ಜಗಳ ಆಡಿದ್ದಾರೆ.