ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರದ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರ ಎಂಟ್ರಿಯಿಂದ ದೊಡ್ಮನೆಯ ರಂಗು ಜೋರಾಗಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಸೋನು ಶಾಕಿಂಗ್ ವಿಚಾರವೊಂದು ರಿವೀಲ್ ಮಾಡಿದ್ದಾರೆ. ಮೂಡ್ ಇಲ್ಲಾಂದ್ರೆ ಮೂರು ದಿನ ಆದ್ರೂ ಸ್ನಾನ ಮಾಡಲ್ಲ ಅಂತಾ ಕಿಚ್ಚನ ಮುಂದೆ ಸೋನು ಹೇಳಿದ್ದಾರೆ.

ಈ ವೇಳೆ ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್ ಎದುರು ಸೋನು ಗೌಡ ಒಪ್ಪಿಕೊಂಡರು. ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

Live Tv


