ಅಂತೂ ಇಂತೂ ಕಂಡ ಕನಸನ್ನು ನನಸು ಮಾಡಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕಿ

Public TV
1 Min Read
akshatha kuki

ಬಿಗ್ ಬಾಸ್ ಓಟಿಟಿ 1ರಲ್ಲಿ (Bigg Boss Kannada) ಅಕ್ಷತಾ ಕುಕಿ (Akshatha Kuki) ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ದೊಡ್ಮನೆಯಲ್ಲಿರುವ ತಮ್ಮ ಕನಸೊಂದನ್ನ ಬಿಚ್ಚಿಟ್ಟಿದ್ದರು. ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ನಿಂತು ‘ಐ ಲವ್ ಯೂ’ ಎಂದು ತಮ್ಮ ಗೆಳೆಯ ಪ್ರಪೋಸ್ ಮಾಡಬೇಕು ಎಂಬುದು ನಟಿಯ ಕನಸಾಗಿತ್ತು. ಆ ಆಸೆ ಈಗ ಈಡೇರಿದೆ.

akshatha kuki 2

ಅಕ್ಷತಾ ಕುಕಿ ಕನಸಿನಂತೆ ಪತಿ ಜೊತೆ ಪ್ಯಾರಿಸ್‌ಗೆ (Paris) ಹೋಗಿದ್ದಾರೆ. ಐಫೆಲ್ ಟವರ್ ಮುಂದೆ ಅಕ್ಷತಾಗೆ ಪ್ರಪೋಸ್ ಮಾಡಿದ್ದಾರೆ. ಈ ಸಂದರ್ಭದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಐಫೆಲ್ ಟವರ್ ಮತ್ತು ನೀನು, ಇದು ಸರಿಯಾದ ಕಾಂಬಿನೇಷನ್ ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.

akshatha kuki 1

ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವಿನಾಶ್ (Avinash) ಜೊತೆ ಈ ವರ್ಷದ ಆರಂಭದಲ್ಲಿ ಮದುವೆಯಾದರು. ಗುರುಹಿರಿಯರು ಸಮ್ಮತಿಸಿ ಮದುವೆಗೆ ನಟಿ ಒಪ್ಪಿಗೆ ಸೂಚಿಸಿದ್ದರು. ಈಗ ಪತಿ ಅವಿನಾಶ್ ಜೊತೆ ಫಾರಿನ್‌ನಲ್ಲಿ ಸೆಟೆಲ್ ಆಗಿದ್ದಾರೆ.‌ ಇದನ್ನೂ ಓದಿ:ಪಾಯಲ್ ರಜಪೂತ್ ನಟನೆಯ ‘ಮಂಗಳವಾರಂ’ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್

ರೂಪೇಶ್ ಶೆಟ್ಟಿ(Roopesh Shetty), ಸಾನ್ಯ ಅಯ್ಯರ್ (Saanya Iyer), ಜಯಶ್ರೀ ಆರಾಧ್ಯ (Jayashree Aradhya) ಇದ್ದಂತಹ ಸೀಸನ್‌ನಲ್ಲಿ ಅಕ್ಷತಾ ಕುಕಿ ಭಾಗವಹಿಸಿದ್ದರು. ಒಂದಿಷ್ಟು ಸೀರಿಯಲ್, ಮತ್ತು ಸಿನಿಮಾಗಳಲ್ಲಿ ಅಕ್ಷತಾ ನಟಿಸಿದ್ದಾರೆ. ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Film) ಚಿತ್ರದಲ್ಲೂ ಅಕ್ಷತಾ ಕಾಣಿಸಿಕೊಂಡಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article