ಸ್ಯಾಂಡಲ್ವುಡ್ ನಟಿ (Sandalwood Actress) ಮಯೂರಿ (Mayuri) ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಬಳಿಕ ಸಿನಿಮಾಗೆ ಬ್ರೇಕ್ ಕೊಟ್ಟು ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಗ್ ಬಾಸ್ ಮನೆಗೆ ಬಂದಿರುವ ಮಯೂರಿಗೆ ಕನ್ನಡ ಪಾಠ ಮಾಡಲು ಬಂದ ರೂಪೇಶ್ ರಾಜಣ್ಣಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡಿರುವ ಮಯೂರಿ ಇದೀಗ ಬಿಗ್ ಬಾಸ್ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಕನ್ನಡಪರ ಹೋರಾಟದ ಮೂಲಕ ಗಮನ ಸೆಳೆದಿರುವ ರೂಪೇಶ್ ರಾಜಣ್ಣ ಟಿವಿ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಮನೆಯಲ್ಲಿ ಎಲ್ಲರಿಗೂ ಬುದ್ಧಿವಾದ ಹೇಳಲು ಹೋಗಿ ಬೈಸಿಕೊಂಡಿದ್ದಾರೆ ರೂಪೇಶ್ ರಾಜಣ್ಣ. ಇದನ್ನೂ ಓದಿ:ಕಾವ್ಯಶ್ರೀ ರೂಪೇಶ್ಗೆ ಪ್ರಪೋಸ್ ಮಾಡಿದ್ರೆ ಸಾನ್ಯಗ್ಯಾಕೆ ಸಿಟ್ಟು?
Advertisement
Advertisement
`ನಾವು ನೀರು ಉಳಿಸಬೇಕಿದೆ’ ಎಂದು ಮನೆಮಂದಿಗೆ ರೂಪೇಶ್ ರಾಜಣ್ಣ(Roopesh Rajanna) ಬುದ್ಧಿ ಹೇಳಲು ಹೋಗಿ ಪ್ರಶಾಂತ್ ಸಂಬರಗಿ ಜೊತೆ ಸಖತ್ ಮಾತಿನ ಚಕಮಕಿ ನಡೆದಿತ್ತು. ಅದೇ ರೀತಿ ಕನ್ನಡದ ವಿಚಾರವಾಗಿ ಪಾಠ ಮಾಡಲು ಹೋಗಿ ನಟಿ ಮಯೂರಿ ಕೆಂಗಣ್ಣಿಗೆ ರೂಪೇಶ್ ರಾಜಣ್ಣ (Roopesh Rajanna) ಗುರಿಯಾಗಿದ್ದಾರೆ.
Advertisement
ನಿಮಗೆ ಮಾತ್ರ ಕನ್ನಡದ ಬಗ್ಗೆ ಕಾಳಜಿ ಇರೋದಾ, ಬೇರೆಯವರಿಗೆ ಇಲ್ವಾ? ನಿಮ್ಮ ಭಯದಿಂದ ನಾನು ಕನ್ನಡ ಮಾತನಾಡುವ ಅವಶ್ಯಕತೆ ಇಲ್ಲ. ನಾನು ಅಪ್ಪಟ ಕನ್ನಡದ ಹುಡುಗಿ. ಎಲ್ಲಾ ಭಾಗದ ಕನ್ನಡ ನನಗೆ ತಿಳಿದಿದೆ ಎಂದು ಕನ್ನಡದ ಬಗ್ಗೆ ತಮಗಿರುವ ಕಾಳಜಿ ಬಗ್ಗೆ ತಿಳಿಸಿದ್ದಾರೆ.