‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಮೂಲಕ ಗಮನ ಸೆಳೆದ ವರ್ತೂರು ಸಂತೋಷ್ (Varthur Santhosh) , ಸಿರಿ, ಅವಿನಾಶ್ ಶೆಟ್ಟಿ, ತನಿಷಾ ಕುಪ್ಪಂಡ ಬಹುದಿನಗಳ ನಂತರ ಭೇಟಿಯಾಗಿದ್ದಾರೆ. ವರ್ತೂರಿನಲ್ಲಿ ಒನ್ ಡೇ ಔಟಿಂಗ್ ಮಾಡಿದ್ದಾರೆ. ಸದ್ಯ ಮೀಟ್ ಆಗಿರುವ ‘ಬಿಗ್ ಬಾಸ್’ ತಾರೆಯರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವರ್ಷದ ಬಿಗ್ ಬಾಸ್ ಶೋ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದ ಕಾರ್ಯಕ್ರಮ. ಗಲಾಟೆ, ಗದ್ದಲದ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಇದೀಗ ಈ ಶೋ ಮುಗಿದ ‘ಬಿಗ್ ಬಾಸ್’ ಸ್ಪರ್ಧಿಗಳು ಒಬ್ಬರನ್ನೊಬ್ಬರು ಮರೆತ್ತಿಲ್ಲ. ಶೋ ನಂತರ ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ಬೆಂಬಲಕ್ಕೆ ನಿಂತ ನಟ ಅಲ್ಲು ಅರ್ಜುನ್
ಎಲ್ಲ ಸ್ಪರ್ಧಿಗಳ ಒಂದಲ್ಲ ಒಂದು ಕಾರಣಕ್ಕೆ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದಾರೆ, ಇನ್ನೊಬ್ಬರ ಪ್ರಾಜೆಕ್ಟ್‌ಗಳು, ಹೊಸ ಕಾರ್ಯಗಳಿಗೆ ಬೆಂಬಲಿಸುತ್ತಿದ್ದಾರೆ. ಇದೀಗ ಸಿರಿ, ತನಿಷಾ ಕುಪ್ಪಂಡ(Tanisha Kuppanda), ಅವಿನಾಶ್ ಶೆಟ್ಟಿ, ವರ್ತೂರು ಸಂತೋಷ್ ಅವರು ವರ್ತೂರಿನಲ್ಲಿ ಒಟ್ಟಾಗಿ ಊಟ ಮಾಡಿದ್ದಾರೆ. ಅಲ್ಲಿಯೇ ಇದ್ದ ತೋಟಕ್ಕೆ ಭೇಟಿ ನೀಡಿದ್ದಾರೆ. ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ತೋಟದಲ್ಲಿದ್ದ ಹಣ್ಣುಗಳನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ನಲ್ಲಿ ಸತೋಷ್ ಅವರ ಊರಿನಲ್ಲಿ ಎಲ್ಲರೂ ಮಸ್ತ್ ಆಗಿ ಎಂಜಾಯ್ ಮಾಡಿದ್ದಾರೆ.