ಬಿಗ್ ಬಾಸ್ (Bigg Boss Kannada) ಶೋ ಮೂಲಕ ಮನೆ ಮಾತಾದ ಪ್ರಶಾಂತ್ ಸಂಬರ್ಗಿ (Prashanth Sambargi) ಇದೀಗ ರಾಜಕೀಯ (Politics) ಅಖಾಡಕ್ಕೆ ಕಾಲಿಟ್ಟಿದ್ದಾರೆ. ಕಿರುತೆರೆಯಲ್ಲಿ ರಾಜಕಾರಣಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ
ದೊಡ್ಮನೆಯಲ್ಲಿ ತಮ್ಮ ಖಡಕ್ ಮಾತುಗಳಿಂದ ಗಮನ ಸೆಳೆದ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. `ಕೆಂಡಸಂಪಿಗೆ’ (Kendasampige Serial) ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ಪ್ರಸಾದ್ ಮುಂದೆ ಸೆಡ್ಡು ಹೊಡೆಯಲು ಸಂಬರ್ಗಿ ಎಂಟ್ರಿ ಕೊಟ್ಟಿದ್ದಾರೆ.
ಮೊದಲ ಬಾರಿಗೆ ರಾಜಕಾರಣಿ ಪಾತ್ರದ ಮೂಲಕ ಸಂಬರ್ಗಿ ನಟಿಸಿದ್ದಾರೆ. ಭೈರತಿ ಕುಣಿಗಲ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಅವಕಾಶ ಮೊದಲು ಹೆಸರಾಂತ ನಟ ಅವಿನಾಶ್‌ಗೆ ಸಿಕ್ಕಿತ್ತು. ಡೇಟ್ ಕ್ಲಾಶ್ ಆದ ಕಾರಣ, ಪ್ರಶಾಂತ್ ಸಂಬರ್ಗಿ ಅವರಿಗೆ ಅವಕಾಶ ಒಲಿದು ಬಂತು.
ಅತಿಥಿ ಪಾತ್ರದ ಮೂಲಕ ಕಿರುತೆರೆ ಸಿನಿ ಪ್ರೇಕ್ಷಕರಿಗೆ ರಂಜಿಸಲು ಸಂಬರ್ಗಿ ರೆಡಿಯಾಗಿದ್ದಾರೆ. ದೊಡ್ಮನೆಯಲ್ಲಿ ಗಮನ ಸೆಳೆದ ಸಂಬರ್ಗಿ ಈಗ ರಾಜಕಾರಣಿಯಾಗಿ ಟಿವಿ ಪರದೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಾರಾ ಕಾದುನೋಡಬೇಕಿದೆ.