ದೊಡ್ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನ ಬಿಗ್ ಬಾಸ್ (Bigg Boss) ನೀಡಿದ್ದಾರೆ. ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 9ರ ಫಿನಾಲೆಗೆ ನಾಲ್ಕು ದಿನ ಬಾಕಿಯಿದೆ. ಈ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪೂರೈಸದೇ ಉಳಿದ ಆಸೆಯನ್ನ ಪೂರೈಸುವ ಭರವಸೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಅವುಗಳ ಪೈಕಿ ಸಾಧ್ಯವಿರುವ ಒಂದು ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಾರೆ. ಒಬ್ಬಬ್ಬರಾಗಿ ತಮ್ಮ ಆಸೆಗಳನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಿವ್ಯಾ (Divya Uruduga) ಇಟ್ಟಿರುವ ಬೇಡಿಕೆ ವೀಕ್ಷಕರಿಗೆ ಖುಷಿ ಕೊಟ್ಟಿದೆ. ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ
ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ ಆಶಾ ಭಾವಿಯ ಎದುರು ತಮ್ಮ ಮೂರು ಆಸೆಗಳನ್ನ ಕೋರಿಕೊಂಡು ಆ ನಾಣ್ಯವನ್ನು ಭಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್ (Kiccha Sudeep) ಮನೆಯೊಳಗೆ ಬಂದು ಅಡುಗೆ ಮಾಡಿ. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಬಿಗ್ ಬಾಸ್ 8ರ ದಿವ್ಯಾ ಸಹಸ್ಪರ್ಧಿ ಅರವಿಂದ್ ಕೆ.ಪಿ (Aravind Kp) ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನ ಎಸೆದಿದ್ದಾರೆ. ಈ ಎಲ್ಲದರ ಪೈಕಿ ಬಿಗ್ ಬಾಸ್ ಯಾರ ಆಸೆಯನ್ನು ಪೂರೈಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಮತ್ತು ದಿವ್ಯಾ ಕಾಣಿಸಿಕೊಂಡಿದ್ದರು. ಈ ಶೋನಿಂದ ಪರಿಚಯವಾದ ಸ್ನೇಹ, ಪ್ರೇಮಕ್ಕೆ ತಿರುಗಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.