ಕಿರುತೆರೆಯ ನಂಬರ್ ಒನ್ ಶೋ ಬಿಗ್ ಬಾಸ್(Bigg Boss) ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚನನ್ನು ನೋಡಲೆಂದೇ ಕಾಯುವ ಅಪಾರ ಅಭಿಮಾನಿಗಳಿದ್ದಾರೆ. ಇನ್ನೂ ಈ ವಾರಾಂತ್ಯದ ಮಾತುಕತೆಯಲ್ಲಿ ದಿವ್ಯಾ ಉರುಡುಗ ಅವರಿಗೆ ಅರವಿಂದ್ (Arvind Kp) ವಿಷ್ಯವಾಗಿ ಸುದೀಪ್ ಕಾಲೆಳೆದಿದ್ದಾರೆ.
ಪ್ರೇಕ್ಷಕರು ಮೆಚ್ಚಿರುವ ಬಿಗ್ ಬಾಸ್ ಶೋ ಸಾಕಷ್ಟು ವಿಚಾರವಾಗಿ ಸದ್ದು ಮಾಡುತ್ತಿದೆ. ಬಿಗ್ ಬಾಸ್‌ನ(Bigg Boss) ಎಲ್ಲಾ ಸ್ಪರ್ಧಿಗಳಿಗೆ ಕಿಚ್ಚ ಅಚ್ಚರಿಯ ಗಿಫ್ಟ್‌ವೊಂದನ್ನ ಕಳುಹಿಸಿ ಕೊಟ್ಟಿದ್ದಾರೆ. ತಮ್ಮ ಕೈ ಬರಹದ ರೂಪದಲ್ಲಿ ಕಿಚ್ಚ, ಪ್ರತಿ ಸ್ಪರ್ಧಿಗೂ ಪತ್ರದ ಮೂಲಕ ಉತ್ಸಾಹ ತುಂಬಿದ್ದಾರೆ. ಇನ್ನೂ ಸುದೀಪ್ ಕಳುಹಿಸಿದ್ದ ಪತ್ರದಲ್ಲಿ ದಿವ್ಯಾಗೆ ಬರೆದ ಬರಹ ಎಲ್ಲರ ಗಮನ ಸೆಳೆದಿದೆ.
ಪ್ರೀತಿಯ ದಿವ್ಯಾ ಅವರೇ, ಈ ವಿರಹ ಮುಂದುವರೆಯಲಿ ಅಲ್ವಾ ಎಂದು ದಿವ್ಯಾಗೆ ಕಿಚ್ಚ ಕಾಲೆಳೆದಿದ್ದಾರೆ. ಕಿಚ್ಚನ ಬರಹಕ್ಕೆ ದಿವ್ಯಾ ನಾಚಿ ನೀರಾಗಿದ್ದಾರೆ. ಬಿಗ್ ಬಾಸ್ ಸೀಸನ್ 8ರಲ್ಲಿ ದಿವ್ಯಾ ಉರುಡುಗ(Divya Uruduga) ಮತ್ತು ಅರವಿಂದ್ ಪರಿಚಯವಾಗಿತ್ತು. ಈ ಸ್ನೇಹ ಪ್ರೀತಿಗೆ ತಿರುಗಿ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ದಿವ್ಯಾ ಮತ್ತು ಅರವಿಂದ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಮಗ ಯಥರ್ವ್ ಹುಟ್ಟುಹಬ್ಬಕ್ಕೆ ರಾಧಿಕಾ ಪಂಡಿತ್ ಲವ್ಲಿ ವಿಶ್
ಸದ್ಯ ದಿವ್ಯಾ ಟಿವಿ ಬಿಗ್ ಬಾಸ್ 9ರಲ್ಲಿ ಪ್ರವೀಣರ ಸಾಲಿನಲ್ಲಿ ಪ್ರತಿ ಸ್ಪರ್ಧಿಗೂ ಟಫ್ ಸ್ಪರ್ಧೆ ನೀಡುತ್ತಿದ್ದಾರೆ. ಹೀಗೆ ಗೆಲುವಿನ ವಿಜಯಲಕ್ಷ್ಮಿ ದಿವ್ಯಾ ಪಾಲಿಗೆ ಸಿಗಲಿ ಎಂಬುದೇ ಅಭಿಮಾನಿಗಳ ಆಶಯ. ಈಗಾಗಲೇ ಐಶ್ವರ್ಯ, ನವಾಜ್, ದರ್ಶ್, ಮಯೂರಿ, ನೇಹಾ ಗೌಡ ಮನೆಯಿಂದ ಹೊರ ಬಂದಿದ್ದಾರೆ. ಮುಂದಿನ ವಾರ ದೊಡ್ಮನೆಯ ಆಟ ಯಾರಿಗೆ ಅಂತ್ಯವಾಗಲಿದೆ ಎಂಬುದನ್ನ ಕಾದುನೋಡಬೇಕಿದೆ.