– ರಜತ್ ಜೊತೆಗಿನ ಸ್ನೇಹದಲ್ಲಿ ಬಿರುಕು ವದಂತಿಗೆ ವಿನಯ್ ಸ್ಪಷನೆ
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣ ಈಗ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ – ರಜತ್ ಕಿಶನ್ (Rajath Kishan) ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಜತ್ ಕಿಶನ್ ಕೂಡ ನನ್ನ ಫ್ರೆಂಡ್‌ಶಿಪ್ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ ಎಂದೇ ಹೇಳಿದ್ದರು. ಇದೀಗ ಇಬ್ಬರ ಸ್ನೇಹದ ಬಿರುಕಿನ ಬಗ್ಗೆ ವಿನಯ್ ಗೌಡ (Vinay Gowda) ಪ್ರತಿಕ್ರಿಯೆ ನೀಡಿದ್ದಾರೆ.
ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಎರಡ್ಮೂರು ದಿನ ಇರುಸು-ಮುರುಸು ಇರುತ್ತೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್ ಗೌಡ – ರಜತ್ ನಡುವೆ ಬಿರುಕು?
ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ, ಅವನಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವನು. ಅವನು ಬ್ಲೇಮ್ ಮಾಡ್ದ ಅಂತ ನಾನ್ ಮಾಡಲ್ಲ. ಅವನು ಕರೆದ ಅಂತ ನಾನ್ ಒಪ್ಕೊಂಡೆ ಅದು ತಪ್ಪಾಯ್ತು ಅಂದೆ ಅಷ್ಟೇ. ನಾನು ಕೂಡ ಅವನು ಬಲವಂತವಾಗಿ ಕರೆದ ಅಂತ ಹೇಳಿಲ್ಲ. ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ, ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ. ನಾನು ಪ್ರೊಗ್ರಾಮ್‌ನಲ್ಲಿ ಜಡ್ಜ್ ಆಗಿರೋದ್ರಿಂದ ಅನಿವಾರ್ಯತೆ ಇದ್ದಾಗ ಮಾತ್ರಾ ಹೋಗ್ತಿದ್ದೆ. ಮುಂದಿನ ವಾರ ಸಹ ನನಗೆ ಹೋಗೋಕಾಗಲ್ಲ. ಹಾಗೆಂದ ಮಾತ್ರಕ್ಕೆ ನನ್ನ ರಜತ್ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಕಂಟಿನ್ಯೂ ಆಗುತ್ತೆ. 18 ಸೆಕೆಂಡ್ ರೀಲ್ಸ್ ಗೋಸ್ಕರ 18 ವರ್ಷದ್ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳಲ್ಲ ಅಂತ ವಿನಯ್ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ
ರಜತ್ ಕಿಶನ್ ಹೇಳಿದ್ದೇನು?
ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದ ರಜತ್ ಕಿಶನ್, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ