ಗುನ್ನಾ, ಶಿಷ್ಯ, ಖುಷಿ (Kushi) ಸಿನಿಮಾಗಳಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ನಟಿ ಚೈತ್ರಾ ಹಳ್ಳಿಕೇರಿ ಅವರು ‘ಬಿಗ್ ಬಾಸ್’ (Bigg Boss Kannada) ಶೋ ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ‘ಅಂತರಪಟ’ (Antarapata) ಸೀರಿಯಲ್‌ನ ಚಾಂದಿನಿ ಪಾತ್ರದ ಮೂಲಕ ಮನಗೆಲ್ಲಲು ಸಜ್ಜಾಗಿದ್ದಾರೆ.
ಕನ್ನಡ ಚಿತ್ರಗಳಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ ನಟಿ ಚೈತ್ರಾ ಅವರು ಪೀಕ್‌ನಲ್ಲಿರುವಾಗಲೇ ಮದುವೆಯಾದರು. ಕ್ಯಾಮೆರಾ ಕಣ್ಣಿಂದ ದೂರ ಸರಿದರು. ಬಳಿಕ ಕಳೆದ ವರ್ಷದ ಬಿಗ್ ಬಾಸ್ ಒಟಿಟಿ ಶೋನಲ್ಲಿ ಗಟ್ಟಿ ಸ್ಪರ್ಧಿಯಾಗಿ ಚೈತ್ರಾ ಗುರುತಿಸಿಕೊಂಡರು. ಈಗ ಮತ್ತೆ ಚೈತ್ರಾ ಅವರ ಕಿರುತೆರೆಯ ಪರ್ವ ಶುರುವಾಗಿದೆ. ಇದನ್ನೂ ಓದಿ:ನನ್ನ ಪಾಲಿಗೆ ಇಂದು, ಭವಿಷ್ಯವೂ ನೀನೇ : ಚಿರು ನೆನದ ಮೇಘನಾ ರಾಜ್

ಚಾಂದಿನಿ ಪಾತ್ರ ಕೂಡ ಚೈತ್ರಾ ಅವರ ರಿಯಲ್ ಲೈಫ್‌ಗೆ ಒಪ್ಪುವಂತಿದೆ. ಅವರು ರಿಯಲ್ ಲೈಫ್‌ನಲ್ಲಿ ಗಟ್ಟಿ ವ್ಯಕ್ತಿಯಾಗಿದ್ದಾರೆ. ಎಲ್ಲದನ್ನೂ ಸವಾಲಾಗಿ ಸ್ವೀಕರಿಸುತ್ತಾರೆ. ಒಟ್ನಲ್ಲಿ ‘ಅಂತರಪಟ’ ಸೀರಿಯಲ್ ಮೂಲಕ ಚೈತ್ರಾ ಮೋಡಿ ಮಾಡ್ತಿದ್ದಾರೆ.


