ಬಿಗ್‌ಬಾಸ್ ಸೀಸನ್-12 ದಿನ ಕಳೆದಂತೆಲ್ಲ ರಣರೋಚಕ ಆಗುತ್ತಿದೆ. ಬಿಗ್‌ಬಾಸ್ ಸ್ಪರ್ಧಿಗಳು ಒಬ್ಬರ ಮೇಲೆ ಒಬ್ಬರು ಮುಗಿಬೀಳುತ್ತಲೇ ಇರುತ್ತಾರೆ. ಇಷ್ಟು ದಿನ ಗಿಲ್ಲಿಯನ್ನೇ ಟಾರ್ಗೆಟ್ ಮಾಡುತ್ತಿದ್ದರು ಸ್ಪರ್ಧಿಗಳು. ಅಲ್ಲದೇ ಅಶ್ವಿನಿಗೌಡ ಸಖತ್ ವೈಲೆಂಟ್ ಆಗಿ ಎಲ್ಲರ ಮೇಲೆ ಹರಿಹಾಯ್ತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿಗೌಡ ತಮ್ಮದೇ ಒಂದು ರೂಲ್ ಎನ್ನುವಂತೆ ಆಡುತ್ತಿದ್ದರು.
ಧ್ರುವಂತ್ vs ಧನುಷ್-ಸ್ಪಂದನ-ಸೂರಜ್; ಆದ್ರೆ ಯಾಕೆ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/cq7LMIgyYU
— Colors Kannada (@ColorsKannada) November 28, 2025
ಆದರೆ, ಬಿಗ್‌ಬಾಸ್ ಮನೇಲಿ ಅತಿಥಿಗಳು ಬಂದಮೇಲೆ ಅಶ್ವಿನಿಗೌಡ ಸೈಲೆಂಟ್ ಆಗಿದ್ದಾರೆ. ಆದರೆ, ಧ್ರುವ ಕೆರಳಿ ಕೆಂಡವಾಗಿದ್ದಾರೆ. ಸೂರಜ್ ಹಾಗೂ ಧ್ರುವಂತ್ ನಡುವಿನ ಜಗಳ ಬಿಗ್‌ಬಾಸ್ ಮನೇಲಿ ಜೋರಾಗಿದೆ. ಸೂರಜ್‌ಗೆ ಧ್ರುವಂತ್ ಬಳಸಿದ ಪದಗಳ ಬಗ್ಗೆ ಸ್ಪಷ್ಟನೆ ಕೇಳುವ ವೇಳೆ ಮಧ್ಯದಲ್ಲಿ ಧನುಷ್ ಬಂದಿದ್ದಾರೆ. ಧನುಷ್ ಮೇಲೂ ಧ್ರುವಂತ್ ಜಗಳಕ್ಕಿಳಿದಿದ್ದಾರೆ. ಜಗಳ ತಾರಕಕ್ಕೇರಿದೆ.
ಬಿಗ್‌ಬಾಸ್ ಮನೇಲಿ ಒಂದು ಕಡೆ ಅಶ್ವಿನಿ ಗೌಡ ಈ ಜಗಳವನ್ನೆಲ್ಲ ನಾನು ಎಂಟು ತಿಂಗಳ ಹಿಂದೆನೇ ಆಡಿದ್ದೇನೆ ಎನ್ನುತ್ತಾರೆ. ಇದೀಗ ಧ್ರುವಂತ್ ಹಾಗೂ ಇನ್ನಿತರ ಸ್ಪರ್ಧಿಗಳ ನಡುವೆ ಮಾರಾಮಾರಿ ಜೋರಾಗಿದೆ. ಈ ವಾರ ಈ ವಿಷ್ಯ ಕಿಚ್ಚನ ಪಂಚಾಯ್ತಿಯಲ್ಲಿ ಮುನ್ನೆಲೆಗೆ ಬರಲಿದೆ. ಕಿಚ್ಚನ ಪಂಚಾಯ್ತಿಯಲ್ಲಿ ನ್ಯಾಯ ಯಾರ ಪರ ಇರಲಿದೆ ಕಾದು ನೋಡಬೇಕಿದೆ.

