Bengaluru CityCinemaKarnatakaLatestMain PostSandalwoodTV Shows

ಹೆಂಡ್ತಿ ನೆನಪು ಮಾಡಿಸಿದ್ದಕ್ಕೆ ರಾಜಣ್ಣ, ರೂಪೇಶ್‌ನನ್ನು ಅಟ್ಟಾಡಿಸಿದ ಗುರೂಜಿ

ಬಿಗ್ ಬಾಸ್ ಮನೆ (Bigg Boss House) 60 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇಲ್ಲಿ ಕೋಪ, ದ್ವೇಷ, ನಗು, ಕಾಮಿಡಿ ಎಲ್ಲವೂ ಇದೆ. ಇದೀಗ ಆರ್ಯವರ್ಧನ್ ಗುರೂಜಿಗೆ ರಾಜಣ್ಣ (Rajanna) ಮತ್ತು ರೂಪೇಶ್ ಶೆಟ್ಟಿ (Roopesh Shetty) ಕಾಲೆಳೆದಿದ್ದಾರೆ. ಗುರೂಜಿ ಪತ್ನಿಯ ಹೆಸರು ಹೇಳಿ ಫುಲ್ ಕಾಮಿಡಿ ಮಾಡಿ, ಸತಾಯಿಸಿದ್ದಾರೆ.

ಗುರೂಜಿಗೆ ಮಗಳೆಂದರೆ ಪಂಚಪ್ರಾಣ ಅದರಂತೆ ಅವರ ಧರ್ಮಪತ್ನಿ ಅವರ ಜೀವನ ಮತ್ತೊಂದು ಭಾಗ ಎಂದೇ ಹೇಳಬಹುದು. ಇದೀಗ ದೊಡ್ಮನೆಯ ಕಾಡಿನಲ್ಲಿ ವಾಸ ಮಾಡ್ತಿರುವ ಸ್ಪರ್ಧಿಗಳು ಮನರಂಜನೆಗಾಗಿ ಆರ್ಯವರ್ಧನ್‌ಗೆ ಕಾಲೆಳೆದಿದ್ದಾರೆ. ಹೆಂಡ್ತಿ ಹತ್ತಿರ ಹೇಗೆ ಮಾತಡಬೇಕು ಅಂತಾ ಗುರೂಜಿಗೆ ರಾಜಣ್ಣ ಮತ್ತು ರೂಪೇಶ್ ಶೆಟ್ಟಿ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೆಂಡತಿ(Wife) ಹತ್ತಿರ ಹೇಗೆ ಮಾತಡಬೇಕು ಅಂತಾ ಹೇಳಿಕೊಂಡ್ತಿವಿ ಎಂದು ರೂಪೇಶ್ ಶೆಟ್ರ ಮಾತಿಗೆ ಗುರೂಜಿಗೆ ಕೊಂಚ ರಾಂಗ್ ಆಗಿದ್ದಾರೆ. ಬಾಡಿಯಲ್ಲಿರುವ ಎನರ್ಜಿಯೆಲ್ಲಾ ಆಚೆ ಬಂತು ನಿಮ್ಮ ಮಾತು ಕೇಳಿ ಕೇಳಿ ಎಂದು ಗುರೂಜಿ ಗದರಿಸಿದ್ದಾರೆ. ನೀವಿಬ್ಬರೂ ಸೇರಿ ನನ್ನ ಹೆಡ್ನನ್ಮಗ ಅಂತಾ ತಿಳಿದಿದ್ದೀರಾ. ನೀವಿಬ್ಬರೂ ನನ್ನ ಕಾಲು ಹಿಡಿದು ಕ್ಷಮೆ ಕೇಳಬೇಕು ಎಂದು ಗುರೂಜಿ, ರಾಜಣ್ಣ, ರೂಪೇಶ್ ಇಬ್ಬರಿಗೂ ಅಟ್ಟಾಡಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯನ್ನು ಅವಮಾನಿಸಿದ ನಟಿ ರಿಚಾ ಚೆಡ್ಡಾ – ದೆಹಲಿಯಲ್ಲಿ ದೂರು ದಾಖಲು

ಇದರ ಮಧ್ಯೆ ಗುರೂಜಿ ಪಾಡು ನೋಡಿರುವ ಮನೆಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇವರನ್ನ ಹಿಡಿಯೋದೋ ಅಥವಾ ನನ್ನ ಫ್ಯಾಂಟ್‌ನ ಹಿಡಿದುಕೊಳ್ಳಲೋ ಅಂದಿದ್ದಾರೆ. ಹೆಂಡತಿ ಜೊತೆ ಜಾಸ್ತಿ ಕಮ್ಯುನಿಕೇಷನ್ ಮಾಡಿ ಅಂತಾ ಶೆಟ್ರು ಸಲಹೆ ಕೊಟ್ಟಿದ್ದಾರೆ. ರೂಪೇಶ್ ಸಲಹೆಯ ಮಾತಿಗೆ ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button