ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ (Bigg Boss Kannada) ಮನೆಯಲ್ಲೇ ದೆವ್ವ ಕಾಣಿಸಿಕೊಂಡು ಗಾಬರಿ ಮೂಡಿಸಿತ್ತು. ಆಗ ದೊಡ್ಮನೆ ಒಳಗಿದ್ದ ಚೈತ್ರಾ ಕೋಟೂರು ಭೂತ ಕಂಡ ಬೊಬ್ಬೆ ಹಾಕಿದ್ದರು. ಮನೆಯಲ್ಲಿ ದೆವ್ವ ಇದೆ ನಾನು ನೋಡಿದ್ದೇನೆ ಎಂದು ಇಡೀ ಬಿಗ್ ಬಾಸ್ ಮನೆಯ ವಾತಾವರಣವನ್ನೇ ಭಯಭೀತಿಗೊಳಿಸಿದ್ದಳು. ಚೈತ್ರಾ ಮಾತನ್ನು ಅನೇಕರು ನಂಬಿದ್ದರು. ಭಯದಲ್ಲೇ ಅಂದಿನ ದಿನವನ್ನು ಕಳೆಯಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡ ವಿಚಾರ ದೊಡ್ಮನೆ ಒಳಗೆ ಮಾತ್ರವಲ್ಲ, ಆಚೆಯೂ ಸಾಕಷ್ಟು ಸದ್ದು ಮಾಡಿತ್ತು. ತಮ್ಮದೇ ಆದ ಕಲ್ಪನೆಯನ್ನು ಸೇರಿಸಿ ಸುದ್ದಿಯನ್ನು ಮತ್ತಷ್ಟು ದೊಡ್ಡದು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಸದ್ದು ಮಾಡಿತ್ತು. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿದೆ. ಆದರೆ, ಯಾರೂ ಭಯ ಪಡಲು ಹೋಗಿಲ್ಲ. ಕಾರಣ, ಆ ದೆವ್ವವನ್ನು ಸೃಷ್ಟಿ ಮಾಡಿದವರು ಅದೇ ಮನೆಯಲ್ಲೇ ಇದ್ದರು.
ಬಿಗ್ ಬಾಸ್ ಮನೆಯಲ್ಲಿ ಇಂದು ಇಂಟ್ರಸ್ಟಿಂಗ್ ಸಂಗತಿಯೊಂದು ನಡೆಯಿತು. ಒಬ್ಬೊಬ್ಬರು ಒಂದೊಂದು ಸಾಲನ್ನು ಜೋಡಿಸುವ ಮೂಲಕ ಹಾರರ್ ಸಿನಿಮಾದ ಕಥೆಯನ್ನು ರೆಡಿ ಮಾಡಿದರು. ಒಬ್ಬೊಬ್ಬರು ಒಂದೊಂದು ರೋಚಕ ಸಾಲುಗಳನ್ನು ಪೋಣಿಸುವ ಮೂಲಕ ದೆವ್ವದ ಕಥೆಯೊಂದನ್ನು ರೆಡಿ ಮಾಡಿದರು. ಆ ಕಥೆ ನಿಜಕ್ಕೂ ಇಂಟ್ರಸ್ಟಿಂಗ್ ಆಗಿತ್ತು. ಜೋಡಿಸಿದ ಸಾಲುಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇದ್ದವು.
ಅದರಲ್ಲೂ ತುಕಾಲಿ ಸಂತು ದೆವ್ವ, ನಾಗಿಣಿಯಾದ ಎಳೆಗೆ ಹಾಲು ಕುಡಿಸುವ ದೃಶ್ಯವನ್ನೂ ಪೋಣಿಸಿದರು. ಅಲ್ಲಿಂದ ಕಥೆಯ ಚಿತ್ರಣವೇ ಬದಲಾಯಿತು. ಇಡೀ ಮನೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಯಾವುದೇ ಕೆಲಸವಿರಲಿ ಎಲ್ಲರೂ ಕೈ ಜೋಡಿಸಿದರೆ ಅದ್ಭುತವಾದ ಕೆಲಸವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿತ್ತು.
ಈ ಕಥೆ ಹೆಣೆಯುವ ಪ್ರಕ್ರಿಯೆಯಲ್ಲಿ ಸ್ನೇಕ್ ಶ್ಯಾಮ್ ಉತ್ತೇಜಿಸುತ್ತಲೇ, ಹಾದಿ ತಪ್ಪುವ ಮಾತುಗಳಿಗೆ ಬ್ರೇಕ್ ಹಾಕುತ್ತಿದ್ದರು. ಕೆಲವರು ಉತ್ಸಾಹದಿಂದ ಭಾಗಿಯಾದರೆ, ಇನ್ನೂ ಕೆಲವರು ಕಥೆ ಕೇಳಿಕೊಂಡು ಎಂಜಾಯ್ ಮಾಡುತ್ತಿದ್ದರು. ಅವರು ಕಟ್ಟಿದ ಕಥೆಯನ್ನು JioCinema live ನಲ್ಲೂ ವೀಕ್ಷಿಸಬಹುದು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]