ತಮಿಳಿನತ್ತ ರೂಪೇಶ್ ಶೆಟ್ಟಿ- ಯೋಗಿ ಬಾಬು ಜೊತೆ ‘ಬಿಗ್ ಬಾಸ್’ ವಿನ್ನರ್

Public TV
1 Min Read
roopesh shetty

ರಾವಳಿ ಹುಡುಗ ರೂಪೇಶ್ ಶೆಟ್ಟಿ (Roopesh Shetty) ಇದೀಗ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಕಾಲಿವುಡ್‌ನ (Kollywood) ಖ್ಯಾತ ಹಾಸ್ಯ ಕಲಾವಿದ ಯೋಗಿ ಬಾಬು (Yogi Babu) ಜೊತೆ ತೆರೆಹಂಚಿಕೊಳ್ಳುವ ಅವಕಾಶ ಬಿಗ್ ಬಾಸ್ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ ಗಿಟ್ಟಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:Kantara Chapter 1: ರಿಷಬ್‌ ಶೆಟ್ಟಿಗೆ ನಾಯಕಿ ಯಾರು? ಹೊರಬಿತ್ತು ಅಚ್ಚರಿಯ ಹೆಸರು

roopesh shetty 1

ಇಂದು ತುಂಬಾ ಖುಷಿಯ ದಿವಸ ನಿಮ್ಮೆಲ್ಲರ ಆಶೀರ್ವಾದ ಹಾಗೂ ಪ್ರೋತ್ಸಾಹದಿಂದ ಇಂದು ಒಂದು ಅದ್ಭುತ ತಂಡದ ಜತೆಗೆ ‘ಸನ್ನಿಧಾನಮ್ ಪಿ.ಓ’ (Sannidhanam P.O) ಎನ್ನುವ ನನ್ನ ಮೊದಲ ತಮಿಳು ಚಿತ್ರ ಮಾಡುವ ಅವಕಾಶ ದೊರಕಿದೆ ಎಂದು ರೂಪೇಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ಹಾಸ್ಯ ನಟರಾದ ಯೋಗಿ ಬಾಬು ಅವರ ಜೊತೆ ನಟಿಸುವ ಅವಕಾಶ ನನ್ನ ಪಾಲಿಗೆ ದೊಡ್ಡ ಹೆಮ್ಮೆ ಎಂದಿದ್ದಾರೆ. ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ ಎಂದು ನಟ ಮನವಿ ಮಾಡಿದ್ದಾರೆ.

roopesh shetty 2

ಯೋಗಿ ಬಾಬು (Yogi Babu) ಮತ್ತು ‘ಕಾಂತಾರ’ (Kantara) ಸಿನಿಮಾ ನಟ ಪ್ರಮೋದ್ ಶೆಟ್ಟಿ (Pramod Shetty) ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಸನ್ನಿಧಾನಮ್ ಪಿ.ಓ’ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಅವರಿಗೂ ಚಾನ್ಸ್ ಸಿಕ್ಕಿದೆ. ಆ ಪಾತ್ರಕ್ಕೆ ಬಹಳಷ್ಟು ಪ್ರಾಮುಖ್ಯತೆ ಇದೆ.

ಈಗಾಗಲೇ ಕನ್ನಡ, ತುಳು, ತೆಲುಗಿನಲ್ಲಿ ನಟಿಸಿರುವ ರೂಪೇಶ್ ಶೆಟ್ಟಿಗೆ (Roopesh Shetty) ತಮಿಳಿನಲ್ಲಿಯೂ ಗುರುತಿಸಿಕೊಳ್ಳುವ ಒಂದೊಳ್ಳೆಯ ಅವಕಾಶ ಸಿಕ್ಕಿದೆ. ಇದು ರೂಪೇಶ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

Share This Article