ಬಿಗ್ ಬಾಸ್ ಮನೆಯ(Bigg Boss House) ಪ್ರೇಮ ಪಕ್ಷಿಗಳಾಗಿದ್ದ ಸಾನ್ಯ(Sanya Iyer) ಮತ್ತು ರೂಪೇಶ್ ಶೆಟ್ಟಿ(Roopesh Shetty) ಇದೀಗ ದೂರ ದೂರ ಆಗಿದ್ದಾರೆ. ಸಾನ್ಯಗಾಗಿ ರೂಪೇಶ್ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಿರುವಾಗ ಸಾನ್ಯಗಾಗಿ ರೂಪೇಶ್ ಗಟ್ಟಿ ನಿರ್ಧಾರ ಮಾಡಿದ್ದಾರೆ.
ಓಟಿಟಿಯಿಂದ ಬಿಗ್ ಬಾಸ್ (Bigg Boss) ವರೆಗೂ ಮೋಡಿ ಮಾಡಿರುವ ಜೋಡಿ ಸಾನ್ಯ ಮತ್ತು ರೂಪೇಶ್, ಮನೆಯಲ್ಲಿ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಸಾನ್ಯ ಎಲಿಮಿನೇಷನ್ ಯಿಂದ ರೂಪೇಶ್ ಕೊಂಚ ಡಲ್ ಆಗಿದ್ದಾರೆ. ಸಾನ್ಯ ಮಿಸ್ ಯೂ ಅಂತಾ ಹಣೆಪಟ್ಟಿ ಕಟ್ಟಿಕೊಂಡು ಆಕೆಯ ಜಪ ಮಾಡುತ್ತಿದ್ದಾರೆ. ಪುಟ್ಟಗೌರಿಗಾಗಿ ಕಣ್ಣೀರಿಡುತ್ತಿದ್ದಾರೆ.
ಅವಳನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳಿಲ್ಲದೆ ಊಟ ಮಾಡಲು ಆಗುತ್ತಿಲ್ಲ. ನನಗೋಸ್ಕರ ಅವಳು ಊಟಕ್ಕಾಗಿ ಕಾಯುತ್ತಿದ್ದಳು. ಆಗ ನಾನು ನೆಗ್ಲೆಟ್ ಮಾಡುತ್ತಿದ್ದೆ. ಈಗ ಅದರ ಬೆಲೆ ಅರ್ಥ ಆಗುತ್ತಿದೆ. ನಿಜಕ್ಕೂ ಬೇಸರ ಆಗುತ್ತಿದೆ’ ಎಂದು ಊಟ ಮಾಡುತ್ತಲೇ ಕಣ್ಣೀರು ಹಾಕಿದರು ರೂಪೇಶ್ ಶೆಟ್ಟಿ. ಪ್ರತಿ ಬಾರಿ ಊಟ ಮಾಡುವಾಗಲೂ ರೂಪೇಶ್ ಶೆಟ್ಟಿ ಕಣ್ಣೀರು ಹಾಕುತ್ತಿದ್ದಾರೆ. ಜೊತೆಗೆ ಹೊರಗೆ ಹೋಗಿರುವ ಸಾನ್ಯ ಬದಲಾದರೆ ಎಂಬ ಆತಂಕ ಕೂಡ ರೂಪೇಶ್‌ಗೆ ಕಾಡುತ್ತಿದೆ. ಇದನ್ನೂ ಓದಿ:ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ
ಈಗಾಗಲೇ 6 ಜನ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದು, ಮುಂದಿನ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎಂಬುದರ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.