ಬಿಗ್ ಬಾಸ್ ಮನೆಯಲ್ಲಿ(Bigg Boss House) ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿರುವ ರೂಪೇಶ್(Roopesh Shetty) ಮತ್ತು ಸಾನ್ಯ (Sanya Iyer) ತಮ್ಮ ಸಂಬಂಧಕ್ಕೆ ಹೊಸ ಅರ್ಥ ಕೊಟ್ಟಿದ್ದಾರೆ. ಗುರೂಜಿಯನ್ನು ಅಪ್ಪಾಜಿ ಎಂದು ಕರೆಯುವ ರೂಪೇಶ್ ಶೆಟ್ಟಿ ಇದೀಗ ಸಾನ್ಯ ನಿಮ್ಮ ಸೊಸೆ (Daughter in Law) ಎಂದು ಗುರೂಜಿಗೆ ಹೇಳಿರುವುದು ದೊಡ್ಮನೆಯಲ್ಲಿ ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ.
ದೊಡ್ಮನೆಯಲ್ಲಿ ರೂಪೇಶ್, ಸಾನ್ಯ (Sanya Iyer) ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಅನುಮಾನ ಅನೇಕರಿಗಿದೆ. ಪದೇ ಪದೇ ನಾವು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ಗಾಸಿಪ್ಗೆ ಫುಲ್ ಸ್ಟಾಪ್ ಇಟ್ಟಿದ್ದು ಇದೆ. ಒಟಿಟಿಯಿಂದ ಶುರುವಾದ ಸಾನ್ಯ, ರೂಪೇಶ್, ಮತ್ತು ಗುರೂಜಿ ಗೆಳೆತನ ಟಿವಿ ಬಿಗ್ ಬಾಸ್ನಲ್ಲೂ ಮುಂದುವರೆದಿದೆ. ಇದೀಗ ರೂಪೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಆರ್ಯವರ್ಧನ್ ಗುರೂಜಿ ಅವರನ್ನ ಅಪ್ಪ ಎಂದು ಕರೆಯುವ ರೂಪೇಶ್(Roopesh Shetty) ಇದೀಗ ಗುರೂಜಿ ಅವರ ಸೊಸೆ ಸಾನ್ಯ ಅಯ್ಯರ್ ಎಂದು ಬಿಟ್ಟಿದ್ದಾರೆ. ಇದನ್ನೂ ಓದಿ:ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್ಗೆ ಕಿಚ್ಚ ವಾರ್ನಿಂಗ್
ಅಡುಗೆ ಮನೆಯಲ್ಲಿ ಗುರೂಜಿ, ಸಾನ್ಯ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ (Divya Uruduga) ಇದ್ದರು. ಇದ್ಯಾರೋ ಒಡೆದು ಹಾಕಿದ್ದಾರೆ ಎಂದು ಗುರೂಜಿ ಹೇಳಿದಾಗ, ನಿಮ್ಮ ಮಗನೇ ರೂಪೇಶ್ ಇನ್ಯಾರು ಎಂದು ಸಾನ್ಯ ಉತ್ತರಿಸುತ್ತಾರೆ. ಆಗ, ಇದನ್ಯಾರು ಕ್ಲೀನ್ ಮಾಡಿದ್ರು ಗೊತ್ತಾ ಅಪ್ಪಾಜಿ ಕ್ಲೀನ್ ಮಾಡಿದ್ದು ನಿಮ್ಮ ಸೊಸೆ ಸಾನ್ಯ ಎನ್ನುತ್ತಾರೆ ರೂಪೇಶ್ ಶೆಟ್ಟಿ. ಬಳಿಕ ಏಯ್ ಸೊಸೆ ಅಂತೆ ಒಪ್ಪಿಕೊಂಡವ್ನೆ, ಸೊಸೆ ಅಂತ ಹೇಳಿದ ಎಂದು ಆರ್ಯವರ್ಧನ್ ಗುರೂಜಿ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಕೂಡ ಕಂಗ್ರ್ಯಾಟ್ಸ್ ಎನ್ನುತ್ತಾರೆ.
ನಾನು ಯಾವಾಗ ಅವನ ಹೆಂಡತಿ ಆಗ್ತೀನಿ ಅಂದೆ, ಯಾರು ಪರ್ಮಿಷನ್ ಕೊಟ್ಟಿದ್ದು ಎಂದು ಸಾನ್ಯ ಅಯ್ಯರ್ ಪ್ರಶ್ನಿಸುತ್ತಾರೆ. ಅದಕ್ಕೆ, ತಮಾಷೆಗೆ ಹೇಳಿದ್ದು ನಾನು. ಅವಳು ಜಸ್ಟ್ ಫ್ರೆಂಡ್ ಅಷ್ಟೇ ಎಂದರು ರೂಪೇಶ್ ಶೆಟ್ಟಿ. ನೀನು ನಿನ್ನ ಪಾಡಿಗೆ ಇರಬಹುದಿತ್ತು. ಯಾರು ಪರ್ಮಿಷನ್ ಕೊಟ್ಟಿದ್ದು ಅಂತೆಲ್ಲಾ ಯಾಕೆ ಹೇಳಬೇಕಿತ್ತು. ನಾನು ಹೇಳಿದ್ದು ತಮಾಷೆಗೆ. ಯಾರಾಗ್ತಾರೆ ನಿನ್ನ ಹೆಂಡತಿ ಅಂತೆಲ್ಲಾ ಕೇಳಿದೆ. ನನಗೆ ಇನ್ಸಲ್ಟ್ ಆಗುತ್ತೆ. ನಾನು ಹೇಳಿದ್ದು ತಮಾಷೆಗೆ ಅಷ್ಟೇ ಎಂದು ಬೇಸರದಿಂದ ರೂಪೇಶ್ ಹೇಳಿದ್ದಾರೆ.