ಬಿಗ್ ಬಾಸ್ ಸೀಸನ್ 9ರ (Bigg Boss) ವಿನ್ನರ್ ಆಗಿ ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ದೊಡ್ಮನೆಯ ಆಟ ಇದೀಗ ಅಂತ್ಯವಾಗಿದೆ. ಈ ವೇಳೆ `ಗಡಿನಾಡ ಕನ್ನಡಿಗ’ ಎಂದು ವಿವಾದದ ಬಗ್ಗೆ ರೂಪೇಶ್ ಶೆಟ್ಟಿ (Roopesh Shetty) ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ ರೂಪೇಶ್, `ನಾನು ಗಡಿನಾಡ ಕನ್ನಡಿಗ’ (Gadinada Kannadaiga) ಅಂತ ಹೇಳಿ, ತಾನು ಹುಟ್ಟಿ ಬೆಳೆದ ಊರಿನ ಬಗ್ಗೆ ಮಾತನಾಡಿದ್ದರು. ಆದರೆ ಇದು ತುಳುವರ ಅಸಮಾಧಾನಕ್ಕೆ ಕಾರಣವಾಗಿತ್ತು. ತುಳುನಾಡಿನಲ್ಲಿ ಖ್ಯಾತಿಯಾಗಿರುವ ರೂಪೇಶ್ ಶೆಟ್ಟಿ ಗಡಿನಾಡ ಕನ್ನಡಿಗ ಅಂತಾ ಹೇಳಿಕೆ ನೀಡಿದ್ದು, ತುಳುವರ ಅಸಮಾಧಾನಕ್ಕೆ ಕಾರಣವಾಗಿತ್ತು. ಅವರನ್ನು ವಿರೋಧಿಸುವ ಭರದಲ್ಲಿ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಇದೀಗ ಈ ಬಗ್ಗೆ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಗಡಿನಾಡ ಕನ್ನಡಿಗ ಅಂದಿದ್ದು ಯಾಕೆ ರಾಂಗ್ ಆಯ್ತು ನನಗೆ ಗೊತ್ತಿಲ್ಲ. ಕರ್ನಾಟಕ ಅಂತಾ ಬಂದಾಗ ತಲಪಾಡಯಿಂದ ಆಚೆಗೆ ಬಾರ್ಡರ್ ಆಗಿದೆ. ಕರ್ನಾಟಕ ಅಂತಾ ಕಾನಸೆಪ್ಟ್ ಬಂದಾಗ ತಲಪಾಡಯಿಂದ ನಮ್ಮ ಮನೆಗೆ 30 ಕಿ.ಲೋ ಮೀಟರ್ ಅಷ್ಟೇ. ಯಾರೆಲ್ಲ ಕರ್ನಾಟಕ್ಕೆ ಸೇರಬೇಕು ಅಂತಾ ಆಸೆ ಪಡ್ತಾರೆ. ಕನ್ನಡವನ್ನು ಕಲಿತ್ತಾರೆ. ಕನ್ನಡವನ್ನ ಕಲಿಬೇಕು ಕರ್ನಾಟಕಕ್ಕೆ ಸೇರಬೇಕು ಎನ್ನುವವರಿಗೆ ಅಲ್ಲಿ ಕರೆಯೋದು ಗಡಿನಾಡ ಕನ್ನಡಿಗ ಅಂತಾ. ನಾನು ಎಲ್ಲಿ ಹುಟ್ಟಿದ್ದು ಅಂತಾ ವಿವರಣೆ ನೀಡುತ್ತಿದ್ದೆ ಎಂದು ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ. ಇದನ್ನೂ ಓದಿ: ಐದು ವರ್ಷದಲ್ಲಿ ಮೂರು ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಫಿಲ್ಮ್ಸ್ ಗೆ ಜೈ ಎಂದ ಚಿತ್ರೋದ್ಯಮ
ನಾನು ಕಾಸರಗೋಡಿನಲ್ಲಿ (Kasaragodu) ಹುಟ್ಟಿದ್ದು, 10 ತರಗತಿ ನಂತರ ನಾನು ಮಂಗಳೂರಿಗೆ (Mangaluru) ಬಂದೆ. ನಾನು ಯಾವಾಗಲೂ ಹೆಮ್ಮೆಯಿಂದ ಹೇಳುತ್ತೇನೆ ನಾನು ಮಂಗಳೂರಿಗ, ನಾನು ತುಳುವ ಎಂದು ಈ ಬಗ್ಗೆ ನನಗೆ ಖುಷಿಯಿದೆ ಎಂದಿದ್ದಾರೆ.