ಬಿಗ್ ಬಾಸ್ ಸೀಸನ್ 9ರ(Bigg Boss Kannada 9) ಆಟ ದಿನದಿಂದ ದಿನಕ್ಕೆ ಸಾಕಷ್ಟು ಟ್ವಿಸ್ಟ್‌ಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಬಿಗ್ ಬಾಸ್ ಹೆಸರಿನಲ್ಲಿ ಪ್ರಾಂಕ್ ಮಾಡಿದ ಮನೆಮಂದಿಗೆ ಬಿಗ್ ಬಾಸ್ ಕೂಡ ಪ್ರಾಂಕ್ ಮಾಡಿ, ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ 13ನೇ ದಿನದಿಂದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಗುರೂಜಿ (Aryavardhan Guruji) ಹೊರಹೊಮ್ಮಿದ್ದಾರೆ. ಮಗಳಿಂದ ಲವ್ಲಿ ವಿಶ್ ಕೂಡ ಗುರೂಜಿ ಪಡೆದಿದ್ದಾರೆ.
ಬಿಗ್ ಬಾಸ್ (Bigg Boss) ತಂಡದ ಕ್ಯಾಪ್ಟನ್ ಅನುಪಮಾಗೆ ಕ್ಯಾಪ್ಟನ್ಸಿ ಆಯ್ಕೆಗೆ ಸೂಚನೆ ನೀಡಿದ್ದರು. ಅದರಂತೆ ಅಮೂಲ್ಯ, ದಿವ್ಯಾ, ಆರ್ಯವರ್ಧನ್ ಗುರೂಜಿ, ದರ್ಶ್ ಆಯ್ಕೆಯಾದರು. ತೆಂಗಿನಕಾಯಿ ಇರುವ ಮರದ ಪಟ್ಟಿಯನ್ನು ಅಡ್ಡಲಾಗಿ ಸಿಕ್ಕಿಸಿ, ಸಂಖ್ಯೆಗಳನ್ನು ಮೂಡುವಂತೆ ಮಾಡಬೇಕು. ನಾಲ್ವರು ಸದಸ್ಯರಿಗೂ ಪ್ರತ್ಯೇಕ ಫ್ರೇಮ್ ಇಡಲಾಗಿತ್ತು. ಈ ಟಾಸ್ಕ್ ನಲ್ಲಿ ಗುರೂಜಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ತಮ್ಮ ನೇರ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಆಗಾಗ ಗುರಿಯಾಗುವ ಗುರೂಜಿ, ಅಡುಗೆ, ಟಾಸ್ಕ್, ಎಲ್ಲದರಲ್ಲೂ ಮುಂದು. ಇದೀಗ 3ನೇ ವಾರದ ಕ್ಯಾಪ್ಟನ್ ಆಗಿ ಗುರೂಜಿ ಹೊರಹೊಮ್ಮಿದ್ದಾರೆ. ಕ್ಯಾಪ್ಟನ್ ಆಗಿರುವ ಗುರೂಜಿಗೆ ಅವರ ಮುದ್ದು ಮಗಳು ಕೂಡ ಶುಭಹಾರೈಸಿದ್ದಾರೆ. ವಾಯ್ಸ್ ನೋಟ್ ಮೂಲಕ ಅಪ್ಪನಿಗೆ ಮಗಳು ವಿಶ್ ಮಾಡಿದ್ದಾರೆ. ಈ ಮೂಲಕ ಗುರೂಜಿಗೆ ಬಿಗ್ ಬಾಸ್ ಗಿಫ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ
ಇನ್ನೂ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಆಡುವಾಗ ಗುರೂಜಿಗೆ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಸಹಾಯ ಮಾಡಿದ್ದಾರೆಂದು ಅನುಪಮಾ ಮತ್ತು ನೇಹಾ ಗೌಡ ಕಿಡಿಕಾರಿದ್ದಾರೆ.