Bengaluru CityCinemaKarnatakaLatestMain PostSandalwoodTV Shows

ದಿವ್ಯಾ, ಅರವಿಂದ್ ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಭವಿಷ್ಯ ನುಡಿದ ಗುರೂಜಿ

ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ನೇರ ನುಡಿಯಿಂದ ಸಾಕಷ್ಟು ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ಗುರೂಜಿ ದಿವ್ಯಾ ಉರುಡುಗ (Divya Uruduga) ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮುಖ, ಕೆನ್ನೆ, ತುಟಿ ನೋಡಿ ಭವಿಷ್ಯ ಹೇಳುತ್ತಿದ್ದ ಗುರೂಜಿ ಇದೀಗ ದಿವ್ಯಾ ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದೊಡ್ಮನೆ ಆಟ ಇದೀಗ ಸಾಕಷ್ಟು ರೋಚಕ ತಿರುವುಗಳನ್ನ ಪಡೆದು ಮುನ್ನುಗ್ಗುತ್ತಿದೆ. ಇನ್ನೂ ಓಟಿಟಿಯಿಂದ ಟಿವಿ ಬಿಗ್ ಬಾಸ್‌ನಲ್ಲೂ ಹೈಲೈಟ್ ಆಗುತ್ತಿರುವ ಆರ್ಯವರ್ಧನ್ ಗುರೂಜಿ, ದಿವ್ಯಾ ಹುಟ್ಟಿದ ದಿನಾಂಕದ ಅನುಸಾರವಾಗಿ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ದಿವ್ಯಾ ಉರುಡುಗ (Divya Uruduga), ಅರವಿಂದ್‌ನ(Aravind Kp) ಮದುವೆಯಾದರೆ ಡಿವೋರ್ಸ್ ಆಗುತ್ತೆ ಎಂದು ಗುರೂಜಿ ಭವಿಷ್ಯ ನುಡಿದಿರೋದು ಈಗ ದಿವ್ಯಾ ಮುನಿಸಿಗೆ ಕಾರಣವಾಗಿದೆ.

ರಾಕೇಶ್ ಅಡಿಗ(Rakesh Adiga) ಬಳಿ ಗುರೂಜಿ ಮಾತನಾಡುತ್ತಿದ್ದರು. ಈ ವೇಳೆ ದಿವ್ಯಾ ಕೂಡ ಇದ್ದರು. ಈ ವೇಳೆ ಹುಟ್ಟಿದ ದಿನಾಂಕ ಅನುಸಾರವಾಗಿ ಭವಿಷ್ಯ ಹೇಳಿದ್ದಾರೆ. 7ನೇ ತಾರೀಖಿನವರಿಗೆ 8ನೇ ತಾರೀಖಿನವರು ಲೈಫ್ ಪಾರ್ಟ್ನರ್ ಆಗೋಕೆ ಆಗಲ್ಲ. ಬೆಸ್ಟ್ ಫ್ರೆಂಡ್ ಆಗಿರ್ತಾರೆ. ಲೈಫ್ ಪಾರ್ಟ್ನರ್ ಆದರೆ ಅವರು ಡಿವೋರ್ಸ್ ಆಗ್ತಾರೆ ಎಂದರು ಆರ್ಯವರ್ಧನ್ ಗುರೂಜಿ. ಇದನ್ನೂ ಓದಿ:ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ: ಅತಿಥಿಯಾಗಿ ಬೆಂಗಳೂರಿಗೆ ಬಂದ ಜ್ಯೂನಿಯರ್ ಎನ್.ಟಿ.ಆರ್

ಅಸಲಿಗೆ, ದಿವ್ಯಾ ಉರುಡುಗ ಅವರದ್ದು 7ನೇ ತಾರೀಖು. ಅರವಿಂದ್.ಕೆ.ಪಿ ಅವರದ್ದು 8ನೇ ತಾರೀಖು. ಹೀಗಾಗಿ, ಆರ್ಯವರ್ಧನ್ ಗುರೂಜಿ ನುಡಿದ ಭವಿಷ್ಯವನ್ನ ದಿವ್ಯಾ ಉರುಡುಗ ಕೈಯಲ್ಲಿ ಅರಗಿಸಿಕೊಳ್ಳಲು ಆಗಲಿಲ್ಲ. ಹೀಗಾಗಿ, ನಮಸ್ಕಾರ ನಿಮ್ಮ ಜ್ಯೋತಿಷ್ಯಕ್ಕೆ. ನಾನು ಇಲ್ವೇ ಇಲ್ಲ ಇದಕ್ಕೆ ಎಂದು ದಿವ್ಯಾ ಎದ್ದು ಹೊರಟುಬಿಟ್ಟರು. ದಿವ್ಯಾ ಮತ್ತು ಅರವಿಂದ ಬಿಗ್ ಬಾಸ್ 8ರಲ್ಲಿ ಪರಿಚಯವಾಗಿ, ಅಲ್ಲಿಂದ ಹೊರಬಂದ ಮೇಲೂ ಜೊತೆಯಾಗಿದ್ದಾರೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಗುರೂಜಿ ಹೇಳಿರುವ ಮಾತು, ದಿವ್ಯಾ ಮನಸ್ಸಿಗೆ ಘಾಸಿಯಾಗಿದೆ.

Live Tv

Leave a Reply

Your email address will not be published. Required fields are marked *

Back to top button