Bengaluru CityCinemaDistrictsKarnatakaLatestMain PostSandalwoodTV Shows

ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್‌ಗೆ ಆಪರೇಷನ್

ಬಿಗ್ ಬಾಸ್ ಮನೆಯಲ್ಲಿ(Bigg Boss)  ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿತ್ತಾಟ ಆಗುತ್ತಲೇ ಇರುತ್ತದೆ. ಗೊಂಬೆ ತಯಾರಿಸುವ ಟಾಸ್ಕ್‌ನಲ್ಲಿ ಅರುಣ್ ಸಾಗರ್ ಕೈ ಬೆರಳಿಗೆ ಪೆಟ್ಟಾಗಿದೆ. ಇದರ ಪರಿಣಾಮ, ಆಪರೇಷನ್ ಕೂಡ ಮಾಡಲಾಗಿದೆ.

ದೊಡ್ಮನೆ ಇದೀಗ ಎಂಟನೇ ವಾರಕ್ಕೆ ಕಾಲಿಟ್ಟಿದೆ. ಸಾಕಷ್ಟು ಟ್ವಿಸ್ಟ್ ಮತ್ತು ತಿರುವುಗಳೊಂದಿಗೆ ಮುನ್ನಗ್ಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಇದೀಗ ಟಾಸ್ಕ್ ವೇಳೆ ಅರುಣ್ ಸಾಗರ್‌ಗೆ ಪೆಟ್ಟಾಗಿದೆ. ಟಾಯ್ ಫ್ಯಾಕ್ಟರಿ ಎಂಬ ಟಾಸ್ಕ್ ಕೊಟ್ಟಿದ್ದರು ಬಿಗ್ ಬಾಸ್. ಈ ಟಾಸ್ಕ್‌ನಲ್ಲಿ ಗೊಂಬೆಗಳನ್ನ ತಯಾರಿಸಲು ಕನ್ವೇಯರ್ ಬೆಲ್ಟ್‌ನಿಂದ ಸಾಮಾಗ್ರಿಗಳನ್ನ ಪಡೆಯಬೇಕಿತ್ತು.

ಹೀಗಾಗಿ, ಸಾಮಾಗ್ರಿಗಳನ್ನ ಪಡೆಯಲು ಎರಡೂ ತಂಡಗಳು ಜಿದ್ದಾಜಿದ್ದಿಗೆ ಬಿದ್ದವು. ಸಾಮಾಗ್ರಿಗಳಿಗಾಗಿ ಎರಡೂ ತಂಡದ ಸದಸ್ಯರ ಮಧ್ಯೆ ಕಿತ್ತಾಟ, ನೂಕಾಟ, ತಳ್ಳಾಟ್ಟ ನಡೆಯಿತು. ಒಮ್ಮೆ ಪ್ರಶಾಂತ್ ಸಂಬರ್ಗಿ ಅವರಿಂದಾಗಿ ಅರುಣ್ ಸಾಗರ್ ಕೆಳಗೆ ಬಿದ್ದರು. ಮತ್ತೊಮ್ಮೆ ಅವರ ಕೈಗೆ ಪೆಟ್ಟು ಬಿತ್ತು. ಬಲಗೈ ಕಿರುಬೆರಳಿಗೆ ಪೆಟ್ಟು ಬಿದ್ದಿದ್ದ ಕಾರಣ ಅರುಣ್ ಸಾಗರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದನ್ನೂ ಓದಿ:ವಿಜಯ್ ದೇವರಕೊಂಡ ನಂತರ ಅವರ ತಾಯಿಯೂ ಅಂಗಾಂಗ ದಾನಕ್ಕೆ ನೋಂದಣಿ

ಚಿಕಿತ್ಸೆ ಅವಶ್ಯವಿದ್ದ ಕಾರಣ ಒಂದು ದಿನ ಆಸ್ಪತ್ರೆಯಲ್ಲೇ ಅರುಣ್ ಸಾಗರ್ ಇದ್ದರು. ಪರಿಣಾಮ, ಕೊನೆಯ ದಿನದ ಟಾಸ್ಕ್‌ನಲ್ಲಿ ಅವರು ಭಾಗವಹಿಸಲಿಲ್ಲ. ಸದ್ಯ ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ವಾಪಸ್ ಆಗಿದ್ದಾರೆ. ತಮ್ಮ ಕೈಗೆ ಆಪರೇಷನ್ ಮಾಡಲಾಗಿದೆ ಎಂದು ಅರುಣ್ ಸಾಗರ್ ಮನೆಮಂದಿಗೆ ತಿಳಿಸಿದ್ದಾರೆ. ಸದ್ಯಕ್ಕೆ ಟಾಸ್ಕ್‌ನಿಂದ ದೂರವಿದ್ದು, ದೊಡ್ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

Live Tv

Back to top button