ಬಿಗ್ ಬಾಸ್ ಮನೆ(Bigg Boss House) ಸಾಕಷ್ಟು ವಿಚಾರವಾಗಿ ಹೈಲೆಟ್ ಆಗುತ್ತಿದೆ. 13ನೇ ದಿನಕ್ಕೆ ಕಾಲಿಟ್ಟಿರುವ ದೊಡ್ಮನೆ ಈಗ ರಣರಂಗವಾಗಿದೆ. ಮೊದಲನೇ ದಿನವಿದ್ದ ನಗು, ಶಾಂತಿ, ಶಿಸ್ತು ಇದೀಗ ಮರೆಯಾಗಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಮೇಲೆ ಆಗಾಗ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಇದರಿಂದ ರೋಸಿ ಹೋಗಿರುವ ಗುರೂಜಿ ತಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಾತನಾಡಿಸಿರುವ ಕಾವ್ಯಶ್ರೀಗೆ ಚಾಕು ತೋರಿಸಿ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ್ದಾರೆ.
ದೊಡ್ಮನೆಯಲ್ಲಿ ತಮ್ಮ ಚಾಣಾಕ್ಷತನ, ಅಡುಗೆ, ಟಾಸ್ಕ್ ಆಡುವ ವೈಖರಿಯಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗೆಯೇ ತಮ್ಮ ನೇರ ಮಾತುಗಳಿಂದ ಕೆಲ ಸ್ಪರ್ಧಿಗಳ ಮುಂದೆ ನಿಷ್ಠುರ ಕೂಡ ಆಗಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮೇಲೆ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಈ ಪರಿಣಾಮ ಸಿಟ್ಟಿನಲ್ಲಿದ್ದ ವೇಳೆಯಲ್ಲಿ ಕಾವ್ಯಶ್ರೀ ಗೌಡ (Kavyashree Gowda) ಕೂಡ ಗುರೂಜಿ ಅನ್ನು ಕೆಣಕಿದ್ದಾರೆ. ಈ ವೇಳೆ ಗುರೂಜಿ ಕಾವ್ಯಗೆ ಕೈ ಕೊಯ್ದುಕೊಳ್ತೀನಿ ಎಂದು ಬೆದರಿಸಿದ್ದಾರೆ.
ಮನೆಯಲ್ಲಿ ಕ್ಯಾಪ್ಟೆನ್ಸಿ ವಿಚಾರವಾಗಿ ಗುರೂಜಿ ಮೇಲೆ ಪ್ರ್ಯಾಂಕ್ ನಡೆದ ಬಳಿಕ ಹತಾಶರಾಗಿದ್ದರು. ಈ ವೇಳೆ ನಾಟಕೀಯವಾಗಿ ಮಾತನಾಡುತ್ತಾರೆ, ಚುಚ್ಚಿ ಮಾತನಾಡಿದ್ದು, ಬೇಸರವಾಯಿತು ಎಂದು ಪದೇ ಪದೇ ಕಾವ್ಯಶ್ರೀ ವಿರುದ್ಧ ಗುರೂಜಿ ಮಾತನಾಡಿದ್ದಾರೆ. ಈ ಪರಿಣಾಮ ನಾಟಕೀಯವಾಗಿ ಎಲ್ಲಿ ಮಾತನಾಡಿದೆ ಎಂದು ಕಾವ್ಯ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ ಕಾವ್ಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ವಿಷ್ಯ ಬಿಡು ಇಲ್ಲಾಂದ್ರೆ ನಾನು ಕೈ ಕೊಯ್ದುಕೊಳ್ಳುತ್ತೇನೆ ಎಂದು ಕಾವ್ಯ ವಿರುದ್ಧ ಗುರೂಜಿ ಫುಲ್ ರಾಂಗ್ ಆಗಿದ್ದಾರೆ. ಇದನ್ನೂ ಓದಿ:ಸಿಮ್ ಖರೀದಿಸಲು ಬಂದ ನಟಿಯನ್ನು ಕೂಡಿ ಹಾಕಿದ ಕಚೇರಿ ಸಿಬ್ಬಂದಿ
ಇನ್ನೂ ವಿನೋದ್ ಗೊಬ್ಬರಗಾಲ ಕ್ಯಾಪ್ಟನ್ಸಿ ನಂತರ 3ನೇ ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಆಯ್ಕೆ ಆಗಿದ್ದಾರೆ. ಟಾಸ್ಕ್‌ನಲ್ಲಿ ದರ್ಶ್, ದಿವ್ಯಾ, ಅಮೂಲ್ಯ ಅವರನ್ನ ಸೋಲಿಸಿ ಕ್ಯಾಪ್ಟನ್ ಆಗಿದ್ದಾರೆ. ವಾರದ ಕಳಪೆ ಹಣೆಪಟ್ಟಿ ಪಡೆದು ರಾಕೇಶ್ ಅಡಿಗ ಜೈಲು ಸೇರಿದ್ದಾರೆ.