ರ್ಯಾಪರ್ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ (Niveditha Gowda) ಡಿವೋರ್ಸ್ (Divorce) ಪಡೆದಿರುವ ಹಿಂದೆ ಹಲವು ವದಂತಿಗಳು ಹಬ್ಬಿತ್ತು. ಡಿವೋರ್ಸ್ ಹಿಂದೆ 3ನೇ ವ್ಯಕ್ತಿಯ ಕೈವಾಡವಿದೆ. ಖ್ಯಾತ ನಟನ ಜೊತೆ ನಿವೇದಿತಾ ಹೆಸರನ್ನು ಲಿಂಕ್ ಮಾಡಿ ಟ್ರೋಲ್ ಮಾಡಲಾಗಿತ್ತು. ಈ ವಿಷ್ಯವಾಗಿ ಇದೀಗ ನಿವೇದಿತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ನಿವೇದಿತಾ ಕೋಟ್ಯಂತರ ರೂಪಾಯಿ ಜೀವನಾಂಶಕ್ಕೆ ಬೇಡಿಕೆಯಿಟ್ಟಿಲ್ಲ: ಚಂದನ್ ಶೆಟ್ಟಿ
Advertisement
3ನೇ ವ್ಯಕ್ತಿ ಜೊತೆ ನನ್ನ ಹೆಸರು ಸೇರಿಸಿ ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಬೇಸರವಾಯಿತು. ನಾವು ಫ್ಯಾಮಿಲಿ ಫ್ರೆಂಡ್ಸ್, ಅವರ ಕುಟುಂಬದ ಜೊತೆ ನಮಗೆ ಉತ್ತಮ ಒಡನಾಟವಿದೆ. ಪ್ರತಿ ವರ್ಷ ನನ್ನ ಹುಟ್ಟುಹಬ್ಬಕ್ಕೆ ಅವರು ವಿಶ್ ಮಾಡ್ತಾರೆ. ನಾನು ಕೂಡ ಮಾಡುತ್ತೇನೆ. ಈ ವರ್ಷ ಯಾಕೆ ಹೀಗೆ ಆಯ್ತು ಗೊತ್ತಿಲ್ಲ ಎಂದಿದ್ದಾರೆ ನಿವೇದಿತಾ. ಅವರಿಗೂ ಫ್ಯಾಮಿಲಿ ಇದೆ. ಮಕ್ಕಳು ಇದ್ದಾರೆ. ಸೆಂಟಿಮೆಂಟ್ಸ್ ಹರ್ಟ್ ಮಾಡಬೇಡಿ. ಎಲ್ಲರಿಗೂ ನೋವಾಗುತ್ತದೆ ಎಂದು ನಿವೇದಿತಾ ಬೇಸರದಿಂದಲೇ ಉತ್ತರ ನೀಡಿದ್ದಾರೆ.
Advertisement
Advertisement
ಒಂದು ಪೋಸ್ಟ್ ಮಾಡಿದ ತಕ್ಷಣ, ಟ್ರೆಂಡಿಂಗ್ ಸಾಂಗ್ ಹಾಕಿದಾಕ್ಷಣ ಇಬ್ಬರ ನಡುವೆ ಲವ್ ಇದೆ ಎನ್ನುವುದು ತಪ್ಪು. ಕೆಲವರು ಅವರ ಪೇಜ್ ರೀಜ್ಗೋಸ್ಕರ ಹೀಗೆಲ್ಲಾ ಮಾಡುತ್ತಾರೆ. ಈ ರೀತಿ ವದಂತಿ ವೈರಲ್ ಆದಾಗ ಆ ವ್ಯಕ್ತಿಗೆ ಕರೆ ಮಾಡಿ ಸಾರಿ ಹೇಳಿದೆ. ಆದರೆ ಅವರೇ ಧೈರ್ಯ ತುಂಬಿದ್ದರು. ಇದಕ್ಕೆಲಾ ಬೇಜಾರು ಮಾಡಿಕೊಳ್ಳಬೇಡ ಎಂದು ಬೆಂಬಲಿಸಿದ್ದರು ಎಂದು ನಿವೇದಿತಾ ಕ್ಲ್ಯಾರಿಟಿ ನೀಡಿದ್ದರು.
Advertisement
ಬಳಿಕ ಚಂದನ್ ಕೂಡ ಈ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿವೇದಿತಾ ಹೆಸರನ್ನು 3ನೇ ವ್ಯಕ್ತಿ ಜೊತೆ ಸಂಬಂಧ ಕಲ್ಪಿಸಿ ಮಾತನಾಡಿದ್ದು, ಬೇಸರ ಆಯ್ತು. ಆ ವ್ಯಕ್ತಿಯ ಮನೆಗೆ ಸಾಕಷ್ಟು ಬಾರಿ ಹೋಗಿದ್ದೇನೆ. ಅವರ ಮನೆಯಲ್ಲಿ ಫಂಕ್ಷನ್ ಅಂದರೆ ನಮಗೆ ಖುಷಿಯಾಗುತ್ತಿತ್ತು. ಆ ವ್ಯಕ್ತಿ ಜೊತೆ ಸಂಬಂಧ ಇದೆ ಎಂದು ಬಿಂಬಿಸಿರುವುದು ಸರಿಯಲ್ಲ. ನಾವು ಕನ್ನಡಿಗರಾಗಿ ಹೀಗೆ ಮಾಡುವುದು ಶೋಭೆಯಲ್ಲ ಎಂದು ಮಾತನಾಡಿದರು.
ನಮ್ಮ ನಡುವೆ ಮಗುವಿನ ವಿಚಾರಕ್ಕೆ ಕಿತ್ತಾಟ ಆಗಿಲ್ಲ. ಮಗುವಿನ ವಿಚಾರಕ್ಕೆ ನಾವಿಬ್ಬರೂ ಬೇರೇ ಆಗಿಲ್ಲ. ಇದು ಸುಳ್ಳು ವದಂತಿ ಎಂದಿದ್ದಾರೆ. ನಿವೇದಿತಾ ನನ್ನ ಕಡೆಯಿಂದ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ ಅಂತ ವದಂತಿ ಹಬ್ಬಿದೆ. ಅವರು ಕೋಟ್ಯಂತರ ರೂಪಾಯಿ ಬೇಡಿಕೆ ಇಟ್ಟಿದ್ರೂ ಅಂತ ವದಂತಿ ಆಗಿತ್ತು. ಖಂಡಿತವಾಗಿಯೂ ಈ ವಿಚಾರ ಸುಳ್ಳು. ನಿವೇದಿತಾ ನನಗೆ ಜೀವನಾಂಶ ಕೇಳಿಯೂ ಇಲ್ಲ. ನನ್ನಿಂದ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಇಬ್ಬರೂ ಪರಿಚಿತರಾದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು.