ಪರಿಸರ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾಲಿವುಡ್ ಸ್ಟುಡಿಯೋಸ್‌ಗೆ ಬೀಗ ಬಿದ್ದಿದ್ದು, ಅಲ್ಲೇ ನಡೆಯುವ ಬಿಗ್‌ಬಾಸ್ ಶೋ ಕೂಡ ಬಂದ್ ಆಗಿದೆ. ಬಿಗ್‌ಬಾಸ್ ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ.
ಅಧಿಕೃತವಾಗಿ ಬಿಗ್‌ಬಾಸ್ ಮನೆಗೆ ಬೀಗ ಹಾಕಲಾಗಿದೆ. ಸ್ಪರ್ಧೆಯಲ್ಲಿದ್ದ ಎಲ್ಲರನ್ನೂ ರಾತ್ರಿ ಮನೆಯಿಂದ ಹೊರಹಾಕಲಾಗಿದೆ. ಸ್ವತಃ ತಹಶೀಲ್ದಾರ್ ತೇಜಸ್ವಿನಿಯವರು ಮುಂದೆ ನಿಂತು ಸ್ಪರ್ಧಿಗಳು ಹೊರಗೆ ಕರೆತಂದಿದ್ದಾರೆ.
ಬಿಗ್‌ಬಾಸ್ ದಿಢೀರ್ ಸ್ಥಗಿತದಿಂದ ಸ್ಪರ್ಧಿಗಳು, ತಂತ್ರಜ್ಞರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಮನೆಗೆ ವಾಪಸ್ ಆಗುವಂತಾಗಿದೆ. ಆರು ತಿಂಗಳ ಕಾಲ ಮೂರು ಶಿಫ್ಟ್‌ನಲ್ಲಿ ತಂತ್ರಜ್ಞರು ಕೆಲಸ ಮಾಡುತ್ತಿದ್ದರು.
ಐದು ಕೋಟಿಗೂ ಅಧಿಕ ವೆಚ್ಚದಲ್ಲಿ ಬಿಗ್ ಬಾಸ್ ಮನೆ ನಿರ್ಮಾಣವಾಗಿತ್ತು. ಈಗ ತಾತ್ಕಾಲಿಕವಾಗಿ ಅನಾಥವಾಗಲಿದೆ. ಅರಮನೆ ವಿನ್ಯಾಸದಲ್ಲಿ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿತ್ತು. ಕಿಚ್ಚ ಸುದೀಪ್ ಆಶಯದಂತೆ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಮನೆ ನಿರ್ಮಾಣಗೊಂಡಿತ್ತು.