– ಅತ್ತೆ ಮನೆ, ಮದುವೆಯಾಗೋ ಹುಡುಗಿ ಬಗ್ಗೆ ಕೇಳಿದ್ದಕ್ಕೆ ನಾಚಿನೀರಾದ ಬಿಗ್ ಬಾಸ್ ವಿನ್ನರ್
ಬಿಗ್ ಬಾಸ್ ಕನ್ನಡ 11ರ (Bigg Boss Kannada 11) ವಿನ್ನರ್ ಹನುಮಂತ (Hanumantha) ಅವರು ಅತ್ತೆ ಮನೆ, ಮದುವೆಯಾಗುವ ಹುಡುಗಿ ಬಗ್ಗೆ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದಾರೆ.
ಕಪ್ ಹಿಡಿದುಕೊಂಡು ಅತ್ತೆ ಮನೆಗೆ ಯಾವಾಗ ಹೋಗ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹನುಮಂತ, ಅದನ್ನೂ ಹೇಳ್ತೀನಿ. ಮೊದಲು ಊರಿಗೆ ಹೋಗ್ತೀನಿ. ಆಮೇಲೆ ವಿಚಾರ ಮಾಡ್ತೀನಿ ಎಂದು ತಿಳಿಸಿದರು. ಅತ್ತೆ ಮನೆ ಮತ್ತು ಮದುವೆಯಾಗುವ ಹುಡುಗಿ ಬಗ್ಗೆ ಕೇಳುತ್ತಿದ್ದಂತೆ ಹನುಮಂತ ನಾಚಿ ನೀರಾದರು. ಇದನ್ನೂ ಓದಿ: ಸುದೀಪ್ ಸರ್ ರೀತಿ ಬಿಗ್ ಬಾಸ್ ಶೋ ನಡೆಸೋಕೆ ಯಾರಿಂದಲೂ ಆಗಲ್ಲ: ಹನುಮಂತ
ಬಿಗ್ ಬಾಸ್ ಮನೆಯಲ್ಲಿದ್ದಾಗ, ‘ಕಪ್ ಗೆಲ್ಲೋದೆ.. ಅತ್ತೆ ಮನೆ ಮುಂದೆ ಹೋಗಿ ಹೆಣ್ಣು ಕೇಳೋದೆ’ ಅಂತ ಹನುಮಂತ ಡೈಲಾಗ್ ಹೊಡೆದಿದ್ದರು. ಅದು ಕೂಡ ತುಂಬಾ ವೈರಲ್ ಆಗಿತ್ತು.
ಹನುಮಂತ ವಿನ್ನರ್ ಆದ ಬೆನ್ನಲ್ಲೇ ಮದುವೆಯ ಸಿಹಿ ಸುದ್ದಿ ಕೂಡ ಸಿಕ್ಕಿದೆ. ಶೀಘ್ರವೇ ಮಗನ ಮದುವೆ ಮಾಡುತ್ತೇವೆ. ಶುಭ ಕಾರ್ಯಕ್ಕೆ ಸುದೀಪ್ ಸರ್ ಅವರನ್ನೂ ಕರೆಯುತ್ತೇವೆ ಎಂದು ಹನುಮಂತ ತಂದೆ-ತಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ದೋಸ್ತ ನನ್ನ ಪಾಲಿನ ದೇವರು: ಧನರಾಜ್ ಬಗ್ಗೆ ಹನುಮಂತನ ಮನದಾಳ