– ಬಿಗ್ ಬಾಸ್‌ಗೆ ಸುದೀಪ್ ಸರ್ ಇದ್ರೇನೇ ಕಳೆ
ಸುದೀಪ್ ಸರ್ ರೀತಿ ಬಿಗ್ ಬಾಸ್ ಶೋ ನಡೆಸುವುದಕ್ಕೆ ಯಾರಿಂದಲೂ ಆಗಲ್ಲ. ಅವರು ಇದ್ದರೇನೆ ಬಿಗ್ ಬಾಸ್‌ಗೊಂದು ಕಳೆ ಎಂದು ವಿನ್ನರ್ ಹನುಮಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೋಸ್ತ ನನ್ನ ಪಾಲಿನ ದೇವರು: ಧನರಾಜ್ ಬಗ್ಗೆ ಹನುಮಂತನ ಮನದಾಳ
ಸುದೀಪ್ ಸರ್ ಬಿಗ್ ಬಾಸ್ ಬಿಡ್ತಾರೆ ಅಂತ ಕೇಳಿದ್ದೇನೆ. ಆದರೆ, ಮುಂದಿನ ವರ್ಷ ಅವರು ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಸುದೀಪ್ ಸರ್ ಥರ ಯಾರು ಕೂಡ ಶೋ ನಡೆಸೋಕೆ ಆಗಲ್ಲ. ಎಷ್ಟೇ ಮಂದಿ ಇದ್ದರೂ ಸುದೀಪ್ ಸರ್ ಥರ ನಡೆಸೋದು ಕಷ್ಟ. ಶೋಗೆ ಆ ಕಳೆ ಇರಲ್ಲ. ಸುದೀಪ್ ಸರ್ ಇದ್ದರೇನೇ ಬಿಗ್ ಬಾಸ್‌ಗೊಂದು ಕಳೆ ಎಂದು ತಿಳಿಸಿದರು.
ಸುದೀಪ್ ಸರ್ ಅಂದ್ರೆ ಜಗ್ಗ್ ಹೆದರುತ್ತಿದ್ದೆ. ನಾವು ಹಳ್ಳಿಯಲ್ಲಿ ಇದ್ದವರು. ಟಾಕೀಸ್‌ಗೆ ಹೋಗಿ ಸುದೀಪ್ ಸರ್ ಸಿನಿಮಾ ನೋಡಿ ಖುಷಿ ಪಡುತ್ತಿದ್ದೆವು. ಅಂತಹದ್ದರಲ್ಲಿ ಅವರು ನಮ್ಮ ಹತ್ತಿರ ನಿಂತುಕೊಂಡು ಪ್ರೀತಿಯಿಂದ ಮಾತನಾಡುತ್ತಿದ್ದುದನ್ನು ಕಂಡು ನಮಗಂತೂ ಬಹಳ ಖುಷಿಯಾಯಿತು. ಮೊದಲು ಹೋದಾಗ ನಂಬುವುದಕ್ಕೇ ಆಗಲಿಲ್ಲ. ಕೊನೆ ದಿನ ಸುದೀಪ್ ಸರ್ ನಮ್ಮ ಭಜನೆ ಹಾಡು ಕೇಳಿ ಬಹಳ ಖುಷಿ ಪಟ್ಟರು ಎಂದರು. ಇದನ್ನೂ ಓದಿ: ಬಿಗ್ ಬಾಸ್ ಶೋ ಕಪ್ ಗೆಲ್ತೀನಿ ಅಂತ ನನ್ನ ತಲೆಯಲ್ಲೇ ಇರಲಿಲ್ಲ: ವಿನ್ನರ್ ಹನುಮಂತ