ಝ’ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿರುವ ದೊಡ್ಮನೆ ಆಟದಲ್ಲಿ ‘ಬಿಗ್ ಬಾಸ್’ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಶೋಭಾ ಶೆಟ್ಟಿ ಎಲಿಮಿನೇಷನ್ ಬಳಿಕ ಇನ್ನೂಳಿದ ಸ್ಪರ್ಧಿಗಳು ಮನೆಯಲ್ಲಿ ಆಟ ಮುಂದುವರೆಸಲು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಸ್ಪರ್ಧಿಗಳು ಭವಿಷ್ಯ ವೀಕ್ಷಕರ ಕೈಯಲ್ಲಿದೆ.
Advertisement
ದೊಡ್ಮನೆಯಲ್ಲಿ ಎರಡು ಚಾನೆಲ್‌ಗಳಾಗಿ ವಿಂಗಡಿಸಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಎರಡು ತಂಡಗಳಾಗಿ ಡಿವೈಡ್ ಆಗಿದ್ದಾರೆ. ಪರಸ್ಪರ ಪೈಪೋಟಿಗೆ ಬಿದ್ದಿದ್ದಾರೆ. ಬ್ರೇಕಿಂಗ್ ನ್ಯೂಸ್ ಆಟವನ್ನು ಆಡಿದ್ದಾರೆ. 2 ತಂಡಗಳಿಗೂ ಕೊಡ್ತಿರುವ ಟಾಸ್ಕ್‌ಗಳನ್ನು ಪೈಪೋಟಿಗೆ ಬಿದ್ದು ಆಟ ಆಡುತ್ತಿದ್ದಾರೆ. ಇದನ್ನೂ ಓದಿ:BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ
Advertisement
Advertisement
ಈ ಎರಡು ತಂಡಗಳಲ್ಲಿ ಯಾರು ಹೆಚ್ಚು ಮನರಂಜನೆ ನೀಡಿದರು ಎಂಬುದನ್ನು ನಿರ್ಧರಿಸುವುದು ಮಾತ್ರ ವೀಕ್ಷಕರು. ಹೌದು, ‘ಬಿಗ್ ಬಾಸ್ ಕನ್ನಡ’ ಶೋನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಂಥದ್ದೊಂದು ಟ್ವಿಸ್ಟ್ ನೀಡಲಾಗಿದೆ. ಈ ವಾರ ಅತೀ ಹೆಚ್ಚು ಮನರಂಜನೆ ಕೊಡುವ ವಾಹಿನಿಯ ತಂಡ ಯಾವುದು ಎಂದು ವೀಕ್ಷಕರೇ ನಿರ್ಧರಿಸಿ ವೋಟ್ ಮಾಡಬೇಕಿದೆ. ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ವೋಟ್ ಮಾಡಲಿದ್ದಾರೆ.
Advertisement
ಡಿ.2ರ ರಾತ್ರಿಯ ಬಿಗ್ ಬಾಸ್ ಕನ್ನಡ ಸಂಚಿಕೆ ಪ್ರಸಾರವಾದ ಬಳಿಕ ಜಿಯೋ ಸಿನಿಮಾ ಆಪ್‌ನಲ್ಲಿ ವೋಟಿಂಗ್ ಲೈನ್ ತೆರೆದುಕೊಳ್ಳಲಿವೆ. ಬುಧವಾರ (ಡಿ.4) ಬೆಳಗ್ಗೆಯವರೆಗೂ ವೋಟಿಂಗ್ ಲೈನ್ಸ್ ಓಪನ್ ಇರಲಿದೆ. ಈ ಮೂಲಕ 2 ತಂಡಗಳ ಭವಿಷ್ಯ ಪ್ರೇಕ್ಷಕರ ಕೈಯಲ್ಲಿದೆ.