‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ (Wildcard Contestant )ಹನುಮಂತ ಎಂಟ್ರಿ ಕೊಟ್ಟ ಬಳಿಕ ಇದೀಗ ಇನ್ನಿಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ. ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ ಬುಜ್ಜಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಇಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೇದಿಕೆಗೆ ಎಂಟ್ರಿ ಕೂಡಲೇ ಸುದೀಪ್, ಯಾರು ನಿಮಗೆ ಟಫ್ ಅನಿಸುವ ಸ್ಪರ್ಧಿಗಳು ಅಂತ ಹೇಳಿದ್ದಾರೆ. ಅದಕ್ಕೆ ಶೋಭಾ ಶೆಟ್ಟಿ, ಅವರು ಯಾರು ಇಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಮತ್ತೆ ರಜತ್ ಬುಜ್ಜಿ ಅವರು ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಅರ್ಧ ಪುಕ್ಲು, ಇನ್ನೂ ಅರ್ಧ ತಿಕ್ಲೂ, ಅವರಿಗೆ ಇವರು ಕಂಡ್ರೆ ಆಗೋದಿಲ್ಲ, ಇವರಿಗೆ ಅವರು ಕಂಡ್ರೆ ಆಗೋದಿಲ್ಲ, ಇವರು ಯಾರು ಉದ್ಧಾರ ಆಗೋದಿಲ್ಲ ಸರ್ ಅಂತ ಸುದೀಪ್ ಮುಂದೇಯೇ ಹೇಳಿದ್ದಾರೆ. ಆಗ ಸುದೀಪ್ ಇವರು ನಿಜವಾದ ಬಿಗ್ ಬಾಸ್ ಕಂಟೆಸ್ಟೆಂಟ್ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ.
ಕನ್ನಡತಿ ಶೋಭಾ ಶೆಟ್ಟಿ ಅವರು ಕಳೆದ ತೆಲುಗಿನ ಬಿಗ್ ಬಾಸ್ 7ಕ್ಕೆ ಸ್ಪರ್ಧಿಯಾಗಿ ಆಟ ಆಡಿ ಪ್ರೇಕ್ಷಕರ ಗಮನ ಸೆಳದಿದ್ದರು. ಅಗ್ನಿಸಾಕ್ಷಿ, ನಮ್ಮ ರುಕ್ಕು ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
ಇನ್ನೂ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಟ ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.