ಬಿಗ್ ಬಾಸ್ ಕನ್ನಡ 11ರ ಪ್ರೋಮೋ ಔಟ್- ಹೊಸ ಅಧ್ಯಾಯ ಬರೆಯಲು ಸಜ್ಜಾದ ದೊಡ್ಮನೆ!

Public TV
1 Min Read
bigg boss kannada

ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಕನ್ನಡ ಬಿಗ್ ಬಾಸ್‌ಗೆ ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ. ವಾಹಿನಿ ಬಿಗ್ ಬಾಸ್ ಸೀಸನ್ 11ರ (Bigg Boss Season 11) ಎರಡನೇ ಪ್ರೋಮೋ ಹಂಚಿಕೊಂಡು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

10 ಸೀಸನ್ ಪೂರೈಸಿರುವ ಬಿಗ್ ಬಾಸ್ ಕನ್ನಡ ಈಗ ಹೊಸ ಅಧ್ಯಾಯಕ್ಕೆ ಮುನ್ನಡಿ ಬರೆಯಲು ಸಜ್ಜಾಗಿದೆ. ಸುದೀಪ್ (Actor Sudeep) ಅವರೇ ಈ ಸೀಸನ್ ನಿರೂಪಣೆ ಮಾಡ್ತಾರಾ? ಅಥವಾ ಇಲ್ವಾ? ಎಂಬ ಗೊಂದಲ ಅಭಿಮಾನಿಗಳಲ್ಲಿದೆ. ಇದರ ನಡುವೆ ಬಿಗ್ ಬಾಸ್ ನಯಾ ಪ್ರೋಮೋ ಸಖತ್ ಮಾಡುತ್ತಿದೆ.ಇದನ್ನೂ ಓದಿ: Devara Trailer: ರಕ್ತದಿಂದ ಸಮುದ್ರವೇ ಕೆಂಪಾದ ಕಥೆ ಹೇಳೋಕೆ ಬರುತ್ತಿದ್ದಾರೆ ಜ್ಯೂ.ಎನ್‌ಟಿಆರ್‌, ಜಾನ್ವಿ ಕಪೂರ್‌

ಈ ಪ್ರೋಮೋದಲ್ಲಿ “ನಮಸ್ಕಾರ ಕರ್ನಾಟಕ, ಹೇಗಿದ್ದೀರಾ? 10 ವರ್ಷದಿಂದ ನೋಡ್ತಾನೆ ಇದ್ದೀರಾ. ಇದು ಹೊಸ ದಶಕ, ಹೊಸ ಅಧ್ಯಾಯ’ ಎಂದು ‘ಬಿಗ್ ಬಾಸ್’ ಧ್ವನಿ ಹೇಳಿದೆ. ಈ ಮೂಲಕವೂ ನಿರೂಪಕರು ಯಾರು ಎಂಬುದನ್ನು ವಾಹಿನಿ ರಿವೀಲ್ ಮಾಡದೇ, ಮತ್ತಷ್ಟು ಕುತೂಹಲವನ್ನು ಉಳಿಸಿಕೊಂಡಿದೆ.ಇದನ್ನೂ ಓದಿ: ಕಾಶಿನಾಥ್ ಪುತ್ರನ ಸಿನಿಮಾದ ಟೀಸರ್ ರಿಲೀಸ್: ಕುತೂಹಲ ಮೂಡಿಸಿದ ಸ್ಟೋರಿ

ಈಗಾಗಲೇ ಹೈದರಾಬಾದ್‌ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಪ್ರೋಮೋ (Promo) ಶೂಟ್ ನಡೆದಿದೆ. ಅದರಲ್ಲಿ ಕಿಚ್ಚ ಸುದೀಪ್ ಅವರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಅಂದಹಾಗೆ ಸೆಪ್ಟೆಂಬರ್ ಅಂತ್ಯದಲ್ಲಿ ‘ಬಿಗ್ ಬಾಸ್ ಕನ್ನಡ 11’ (Bigg Boss Kannada 11) ಶುರು ಆಗಲಿವೆ ಎಂಬ ಮಾತು ಕೇಳಿ ಬರುತ್ತಿದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರ ಈ ಶೋ ಪ್ರಸಾರ ಆಗಲಿದೆ ಎನ್ನಲಾಗಿದೆ. ವಾಹಿನಿಯ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

Share This Article