‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರನ್ನರ್ ಅಪ್ ತ್ರಿವಿಕ್ರಮ್ (Trivikram) ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಮುದ್ದು ಸೊಸೆ’ಗೆ ಹೀರೋ ಆಗಿ ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:‘ದಿ ಡೆವಿಲ್’ ಶೂಟಿಂಗ್ ಮತ್ತೆ ಆರಂಭ- ದರ್ಶನ್ ಭದ್ರತೆಗಾಗಿ ಭಾರೀ ಮೊತ್ತ ಕಟ್ಟಿದ ಚಿತ್ರತಂಡ
‘ಬಿಗ್ ಬಾಸ್’ ಶೋ ಮುಗಿಯಿತು ತ್ರಿವಿಕ್ರಮ್ ಮುಂದೇನು ಮಾಡ್ತಾರೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ‘ಮುದ್ದು ಸೊಸೆ’ ಎಂಬ ಹೊಸ ಸೀರಿಯಲ್‌ನಲ್ಲಿ ನಟಿಸಲು ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಮೋಡಿ ಮಾಡಿದ್ದ ಪ್ರತಿಮಾ ಅವರು ‘ಮುದ್ದು ಸೊಸೆ’ಯಾಗಿ ಕಾಣಿಸಿಕೊಳ್ತಿದ್ದಾರೆ.
‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ನಾಯಕ-ನಾಯಕಿಯ ಮದುವೆ ಫಿಕ್ಸ್ ಆಗಿರುತ್ತದೆ. ಇನ್ನೂ 10ನೇ ಕ್ಲಾಸ್ ಓದುತ್ತಿದ್ದ ನಾಯಕಿ ವಿದ್ಯಾಗೆ ಈಗಲೇ ಮದುವೆ ಆಗೋ ಆಸೆ ಇರೋದಿಲ್ಲ. ಓದುವ ಕನಸಿನಿಂದ ಮದುವೆ ಬೇಡ ಎಂದರೂ ಯಾರೂ ಅವಳ ಮಾತನ್ನು ಕೇಳಲು ರೆಡಿ ಇರೋದಿಲ್ಲ. ಇದು ಈ ಸೀರಿಯಲ್‌ನ ಒನ್‌ಲೈನ್ ಸ್ಟೋರಿಯಾಗಿದೆ. ಬಾಲ್ಯ ವಿವಾಹದ ಕಥೆಯಾಗಿದೆ. ಈ ವಿಭಿನ್ನ ಸ್ಟೋರಿಯಲ್ಲಿ ತ್ರಿವಿಕ್ರಮ್ ನಾಯಕನಾಗಿ ನಟಿಸುತ್ತಿದ್ದಾರೆ.
ಈ ಸೀರಿಯಲ್‌ನ ಪ್ರೋಮೋ ರಿಲೀಸ್ ಆಗ್ತಿದ್ದಂತೆ ಭವ್ಯಾ ಗೌಡನೇ ನಾಯಕಿಯಾಗಿದಿದ್ರೆ ಚೆನ್ನಾಗಿರುತ್ತಿತ್ತು ಎಂದು ಪ್ರೇಕ್ಷಕರು ಕಾಮೆಂಟ್ ಮಾಡಿದ್ದಾರೆ. ಸೀರಿಯಲ್ ಶುರುವಾಗೋ ಮುಂಚೆ ನಾಯಕಿಯನ್ನು ಬದಲಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.