Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

Public TV
2 Min Read
BIGG BOSS

ಹಿಂದಿ ಬಿಗ್ ಬಾಸ್ ಒಟಿಟಿ 2ಗೆ ತೆರೆ ಬಂದಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಚಾಲನೆ ನೀಡುವ ಸೂಚನೆ ಸಿಕ್ಕಿದೆ. ಒಟಿಟಿ ಬಿಗ್ ಬಾಸ್ ಯೋಜನೆಗೆ ಬ್ರೇಕ್ ಹಾಕಿ, ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada) ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಟಿವಿ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.ಇದನ್ನೂ ಓದಿ:ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

namratha gowda 1

ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಈ ಬಾರಿ ಹೊಸ ಸೀಸನ್‌ನಲ್ಲಿ ನಾಗಿಣಿ 2 (Nagini 2) ನಟಿ ನಮ್ರತಾ ಗೌಡ (Namratha Gowda), ಹುಚ್ಚ ಚಿತ್ರದ ನಾಯಕಿ ರೇಖಾ (Rekha), ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಭೂಮಿಕಾ ಬಸವರಾಜ್(Bhoomika Basavaraj), ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್ ಧ್ರುವ, ಸೇರಿದಂತೆ ಹಲವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

BIGG BOSS 1

ಎಲ್ಲರ ನೆಚ್ಚಿನ ಕನ್ನಡದ ಬಿಗ್ ಬಾಸ್ ಈಗ ವಾಪಸ್ಸಾಗ್ತಿದೆ. ಕಳೆದ ಸಲ ಮೊಟ್ಟಮೊದಲ ಬಾರಿಗೆ ಒಟಿಟಿಯಲ್ಲಿ ಬಂದ ಬಿಗ್ ಬಾಸ್ ಬೇರೆಯೇ ಹಂತಕ್ಕೆ ತಲುಪಿತ್ತು. ಅದೇ ಫಾರ್ಮುಲಾ ಈ ಬಾರಿನೂ ಮುಂದುವರೆಯುತ್ತೆ ಎನ್ನಲಾಗಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿ (Bigg Boss 2) ಆಟಕ್ಕೆ ಬ್ರೇಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆ ವಾಹಿನಿ.

ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ದಿನಾಂಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂತಾದವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ವಾಹಿನಿಯ ಕಡೆಯಿಂದ ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada 10) ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ತಯಾರಿಯಲ್ಲಿದ್ದಾರೆ. ಇದರ ಜೊತೆ ಜೊತೆಗೆ ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು, ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಸುದೀಪ್‌ (Kiccha Sudeep) ನಿರೂಪಣೆಯಲ್ಲಿ ಬಿಗ್ ಬಾಸ್ ಆರಂಭ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

Share This Article